ಗೀತಾ ಕುಂದಾಪುರ ಅವರು ಬರೆದಿರುವ ಅಪ್ರಮೇಯ 20 ಸಣ್ಣ ಕಥೆಗಳ ಕಥಾಸಂಕಲನವಾಗಿದೆ. ಇದರಲ್ಲಿರುವ ಹೆಚ್ಚಿನ ಕಥೆಗಳು ವಿವಿಧ ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವೊಂದು ಕಥೆಗಳಲ್ಲಿ ಸಂದೇಶ ಕೊಡಲು ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಕೆಲವು ಕಥೆಗಳು ತುಳು ನಾಡಿನಲ್ಲಿ ಚಾಲ್ತಿಯಲ್ಲಿರುವ ಆಚಾರ, ವಿಚಾರಗಳನ್ನು ಭೂತಗಾಜು ಹಿಡಿದು ನೋಡಲು ಪ್ರಯತ್ನಿಸಿ ಕಥೆಯ ಮೂಲಕ ಜನರ ಮುಂದಿಡಲು ಪ್ರಯತ್ನಿಸಿದೆ.
ಬರಹಗಾರ್ತಿ ಗೀತಾ ಕುಂದಾಪುರ ಅವರು ಜನಿಸಿದ್ದು 1967 ಜೂನ್ 23ರಂದು ಎಂಕಾಂ ಪದವಿ ಪಡೆದಿರುವ ಇವರು ವಿದೇಶಗಳಲ್ಲಿ ಪ್ಲಾನರ್ ಮತ್ತು ಪ್ರಾಜೆಕ್ಟ್ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಾಸಕ್ತರಾಗಿದ್ದ ಇವರು ವಿವಿಧ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಿಗೆ ಲೇಖನ ಕತೆಗಳನ್ನು ಬರೆಯುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಇವರು ಬರೆದ ಸಣ್ಣ ಕತೆಗಳು ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದು ‘ಅಪ್ರಮೇಯ’ ಶೀರ್ಷಿಕೆಯಡಿ ಪುಸ್ತಕವಾಗಿ ಪ್ರಕಟಗೊಂಡಿದೆ. ಇವರ ಇನ್ನೊಂದು ಕೃತಿ ದ್ವೀಪಗಳತ್ತ ಯಾನ - ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಕಥನ. ...
READ MORE