ಕನ್ನಡ ಸಾಹಿತ್ಯ ಚಿತ್ರಗಳಿಗೆ ಸಂಬಂಧಿಸಿದಂತೆ ಲೇಖಕ ಎಲ್. ಗುಂಡಪ್ಪನವರು ಬರೆದ ಕೃತಿ ಇದು. ವಿದ್ಯೂಚ್ಚೋರನೆಂಬ ಋಷಿಯ ಕಥೆ, ಭರತ-ಬಾಹುಬಲಿ, ಕಣ್ಣಪ್ಪ, ಕಿನ್ನರ ಬೊಮ್ಮಯ್ಯ, ಉತ್ತರಕುಮಾರ, ನಿಶ್ಯಂಕೆಯ ಕಥೆ, ತಾಂಡವ ಮುನಿ, ಕೋಳೂರು ಕೊಡಗೂಸು ಹೀಗೆ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಇಂತಹ ಕನ್ನಡದ ಸಾಹಿತ್ಯದ 8 ಚಿತ್ರಗಳನ್ನು ಇಲ್ಲಿ ಸಂಕಲಿಸಲಾಗಿದೆ.
ಹಾಸನ ಜಿಲ್ಲೆ ಮತಿಘಟ್ಟದವರಾದ ಎಲ್.ಗುಂಡಪ್ಪ ಅವರು ಕನ್ನಡದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಅವರ ತಂದೆ ಲಿಂಗಣ್ಣಯ್ಯ ಮತ್ತು ತಾಯಿ ಚನ್ನಮ್ಮ. ಮೈಸೂರು ವಿಶ್ವವಿದ್ಯಾಲಯದ ಸಿಲ್ವರ್ ಜ್ಯೂಬಿಲಿ ಕನ್ನಡ ಸ್ವರ್ಣಪದಕ ವಿಜೇತರಾಗಿದರು. ತಮಿಳು - ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದಕ್ಕಾಗಿ ಅವರಿಗೆ ನಾಗರ್ ಕೋಯಲಿನಲ್ಲಿ ಬಂಗಾರದ ಪದಕ ನೀಡಿ ಗೌರವಿಸಲಾಗಿತ್ತು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಮೆ ಅವರದು. ಕಳ್ಳಮರಿ, ಮಕ್ಕಳ ರವೀಂದ್ರರು, ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ವ ಪರಿಚಯ (ಭಾರತ ಸರ್ಕಾರದ ಬಹುಮಾನಗಳಿಸಿರುವ ಕೃತಿ). ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕ ರಚಿಸಿರುವ ಅವರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ದೇವರಾಜ ಬಹದ್ದೂರ್ ಬಹುಮಾನ ದೊರೆತಿದೆ. ಅವರ 52 ಕೃತಿಗಳು ಪ್ರಕಟವಾಗಿವೆ. ...
READ MORE