‘ಎಲ್ಲಿಂದಲೋ ಹಾರಿ ಬಂದು’ ಗಿರಿಧರ್ ಖಾಸನೀಸ್ ಅವರ ಸಣ್ಣ ಕಥೆಗಳು, ಅತಿ ಸಣ್ಣ ಕಥೆಗಳು ಮತ್ತು ಗಪದ್ಯಗಳ ಕುರಿತ ಸಂಕಲನವಾಗಿದೆ. ಈ ಕೃತಿ ಕುರಿತು ಕೆ. ಪುಟ್ಟಸ್ವಾಮಿ ಅವರು ಹೀಗೆ ಹೇಳುತ್ತಾರೆ; ಇಲ್ಲಿನ ರಚನೆಗಳನ್ನು ಓದಿದಾಗ ಅವು ಜಗತ್ತಿನ ಸಾಹಿತ್ಯ, ಕಲೆ, ತತ್ವಜ್ಞಾನ ಎಲ್ಲವನ್ನೂ ನೆನಪಿಗೆ ತಂದು ಅನಂತ ಸಾಧ್ಯತೆಗಳ ಕೆಲಿಡೋಸ್ಕೋಪ್ ಚಿತ್ರಗಳನ್ನು ಹರಡುತ್ತವೆ. ಇಲ್ಲಿ ಬೊರೇಸ್ ನ ಮಾಯಾಲೋಕ, ಕಲಾವಿದ ಕೀಫರ್, ಕತೆಗಾರ ಅಕುತಗವನ ಬೀಭತ್ಸಲೋಕ, ಕಾಪ್ಕ, ಸಿಂಗರ್ ನ ಅಸಂಗತಲೋಕ- ಹೀಗೆ ಹಲವು ದರ್ಶನಗಳನ್ನು ಕಟ್ಟಿಕೊಡುತ್ತವೆ. ಹಕ್ಕಿಯ ರೆಕ್ಕೆಯ ಬಡಿತ ಮೂಡಿಸುವ ಸುಳಿಗಾಳಿಯ ಸೌಂದರ್ಯದಿಂದ ಅಣುಬಾಂಬಿನ ಅಣಬೆ ಮೋಡದ ಭಯಾನಕತೆಯವರೆಗೆ ಇಲ್ಲಿನ ಬರಹಗಳು ವ್ಯಾಪಿಸಿವೆ. ಕೆಲವು ಬರಹಗಳನ್ನು ಓದಿದಾ ಜೆನ್ ಕತೆ/ಕಾವ್ಯ ಹಾಗೂ ಹೈಕುಗಳ ನೆನಪಾಗುತ್ತದೆ. ಕೆಲವು ತತ್ವಪದಗಳಂತಿದ್ದರೆ, ಅವುಗಳ ಸನಿಹದಲ್ಲೇ ರಾಶೊಮನ್ ರೀತಿಯ ಮಲ್ಟಿ-ಪರ್ಸೆಕ್ಟಿವ್ ಬರಹಗಳು ಎದ್ದು ನಿಲ್ಲುತ್ತವೆ.
ಗಿರಿಧರ್ ಖಾಸನೀಸ್ ಅವರು ಕಲಾವಿದ, ಕಲಾ ವಿಮರ್ಶಕ ಹಾಗೂ ಸ್ಥಿರ ಛಾಯಾಗ್ರಾಹಕರೆಂದು ಪರಿಚಿತರು. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ತಮ್ಮ ವಿಸ್ತರಿತ ಅನುಭವ ಹಾಗೂ ವೈವಿಧ್ಯಮಯ ಆಸಕ್ತಿಗಳ ನೆಲೆಯಲ್ಲಿ ಅತಿ ಸಣ್ಣ ಕತೆ ಹಾಗೂ ಗದ್ಯ ಪದ್ಯಗಳನ್ನು ಹೆಣೆದಿದ್ದಾರೆ. ಕೃತಿಗಳು: ಎಲ್ಲಿಂದಲೋ ಹಾರಿ ಬಂದು ...
READ MORE