ಚಿತ್ರಗುಪ್ತನ ಸನ್ನಿಧಿಯಲ್ಲಿ

Author : ಜಯಶ್ರೀ ಕಾಸರವಳ್ಳಿ

Pages 144

₹ 130.00




Year of Publication: 2018
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 26617100, 26617755

Synopsys

’ಚಿತ್ರಗುಪ್ತನ ಸನ್ನಿಧಿ’ಯಲ್ಲಿ ಕಥಾ ಸಂಕಲನದಲ್ಲಿ ಮನುಷ್ಯನ ವಿಕೃತ ಮನಸ್ಥಿತಿ ಅನಾವರಣಗೊಂಡಿದೆ. ದೈಹಿಕ ವಿಕೃತಿಗಳಿಂದಾಗಿ ತಮ್ಮ ಸುತ್ತಲಿನ ಜನರ ಬಗ್ಗೆ ಅನಾದರ, ಅವಹೇಳನ ಎದುರಿಸಬೇಕಾಗುತ್ತದೆ. ವಿಧಿಯು ಯಾರಿಗೂ ಬಾಗುವುದಿಲ್ಲ. ಎಲ್ಲರೂ ಸಮಯಕ್ಕೆ ತಲೆ ಬಾಗಲೇಬೇಕು.  ಅಕಾಲಿಕ ಮರಣಕ್ಕೆ ತುತ್ತಾದವರ ಬಗ್ಗೆ ಜನರ ಪಿಸು ಮಾತುಗಳು ಕತೆಯ ಭಾಗವಾಗಿವೆ.  ಕಥೆಗಳು ಜೀವನದ ನಿಗೂಢತೆ ಮತ್ತು ಬಿಡಿಸಲಾಗದ ನಿರ್ಧಾರಗಳ ಬಗ್ಗೆ ಕಟ್ಟಿ ಕೊಡುತ್ತವೆ. ಕಥೆ ಓದಲು ಆರಂಭಿಸಿದಾಗ  ಭಾಷೆ ತುಂಬ ಗಾಢ ಎನ್ನಿಸಿದರೂ ಓದುತ್ತಾ ಹೋದಂತೆ ತೀರಾ ಆಪ್ತವಾಗುತ್ತವೆ. ಕಥೆಯ ಪಾತ್ರಗಳಲ್ಲಿ ನಮ್ಮನ್ನು ನಾವು ಹುಡುಕಿಕೊಳ್ಳುತ್ತಾ ಹೋಗುವಂತಾಗುತ್ತದೆ. ಲೇಖಕಿ ಜೀವನದ ಎಲ್ಲಾ ಸಾಧ್ಯತೆಗಳನ್ನು ಹಲವು ಆಯಾಮಗಳಲ್ಲಿ ಗ್ರಹಿಸಿ ವಿಶಿಷ್ಟ ರೀತಿಯಲ್ಲಿ ಕಥೆ ಕಟ್ಟಿದ್ದಾರೆ.

 

About the Author

ಜಯಶ್ರೀ ಕಾಸರವಳ್ಳಿ

'ತಂತಿ ಬೇಲಿಯ ಒಂಟಿ ಕಾಗೆ' ಕಥಾ ಸಂಕಲನದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ ಜಯಶ್ರೀ ಕಾಸರವಳ್ಳಿ ಅವರು ಮೊದಲ ಕೃತಿಗೇ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ ಹೀಗೆ ಕೆಲವು ಪ್ರಶಸ್ತಿ ಪಡೆದಿದ್ದಾರೆ. ಮಾರ್ಕೆಸ್ ಸೇರಿದಂತೆ ಹಲವು ಖ್ಯಾತ ಕತೆಗಾರರ ಕತೆಗಳನ್ನು ಜಯಶ್ರೀ ಕನ್ನಡಕ್ಕೆ ಅನುವಾದಿಸಿದ್ದಾರೆ. ನವದೆಹಲಿಯ 'ತುಲಿ ಕಾ' ಪ್ರಕಾಶನದ ಹತ್ತಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಅವರು ಕನ್ನಡೀಕರಿಸಿದ್ದಾರೆ. ...

READ MORE

Excerpt / E-Books

ಕಡೆಗೂ ಒಂದು ದಿನ ಮಳೆ ನಿಂತಿತು ಮಳೆ ನಿಂತ ಅಂತ ಒಂದು ಶುಭ್ರ ಬೆಳಿಗ್ಗೆ ಮನೆಯಿಂದ ಹೊರಬಿದ್ದ ಅವಳು, ಬಡಿದ ಬಿರುಮಳೆಗೆ ಅಂಗಳದ ತುಂಬಾ ಉದುರಿದ್ದ ರಾಶಿ ಮುತ್ತುಗಳನ್ನು ಅರಸುತ್ತಾ ಎದುರಿನ ಬೆಟ್ಟವೇರಿ, ತುತ್ತ ತುದಿ ತಲುಪಿ, ನೀಲಾಕಾಶಕ್ಕೆ ಆಭಿಮುಖವಾಗಿ ಮುಖವೆತ್ತಿ ತುಂತುರು ಹನಿ ವಿಯುತ್ತಾ ಹಾte ಅದನ್ನು ಹೊತ್ತು ನಿಂತೆ? ಇದ್ದಕ್ಕಿದ್ದಂತೆ ಸುರಸುಂದರವಾದ ಹಚ್ಚರಿನಿಂದ ಕಂಗೊಳಿಸುತ್ತಿರುವ ತರುಲತೆಗಳ ತಾಣಿ ಜೋಕಾಲಿಯೊಂದು, ಅಕಾಶದಿಂದಲೇ ಇಳಬಿದ್ದಿದೆಯೇನೋ ಎಂಬಂತೆ ಜೀರುತ್ತಾ ಅವಳ ಮುಂದೆ ಸುಳಿಯತೊಡಗಿದ್ದೇ, ಎಂದಿನಿಂದಲೂ ಅದಕ್ಕಾಗಿ ಕಾಯುತ್ತಿವಳಂತೆ, ಅವಳು ಸಾವಕಾಶವಾಗಿ ಅದನ್ನೇರಿ ಮೆಲ್ಲಗೆ ಮೆಲ್ಲಮೆಲ್ಲಗೆ ಜೀಕಿಕೊಳ್ಳುತ್ತಾ ಆಕಾಶಕ್ಕೂ ಭೂಮಿಗೂ ನಡುವೆ ಓಲಾಡುತ್ತಿರುವುದನ್ನು ಆಮೇಲೆ ಅನೇಕರು ನೋಡಿದರೆಂಬುದು ಗೊತ್ತು

Related Books