ಗಾದೆಗಳನ್ನೇ ಆಧಾರವಾಗಿಟ್ಟುಕೊಂಡು ರಚಿತವಾದ ಕೃತಿ ಭಾರತೀ ಕಾಸರಗೋಡು ಅವರ ‘ಅಮ್ಮ ಹೇಳಿದ ಕಥೆಗಳು’. ಕಥೆಯ ರೂಪದಲ್ಲಿ ಮಕ್ಕಳಿಗೆ ಗಾದೆಗಳನ್ನು ಪರಿಚಯಿಸುವ ಕೆಲಸ ಈ ಕೃತಿಯಲ್ಲಿ ಆಗಿದೆ. ಕತೆಗಳ ಅಂತ್ಯದಲ್ಲಿ ಇಡೀ ಸಾರಾಂಶವನ್ನು ಗಾದೆಯ ರೂಪದಲ್ಲಿ ಇಲ್ಲಿ ಹೇಳಲಾಗಿದೆ. ಉದಾಹರಣೆಗೆ ‘ಇನ್ನೊಬ್ಬರನ್ನು ಅನುಕರಣೆ ಮಾಡಬೇಡಿ, ಸ್ವಂತ ಬುದ್ಧಿ ಉಪಯೋಗಿಸಿ’ ಎನ್ನುವ ಕಿವಿಮಾತು ಹೇಳುವ ‘ಉರುಳಾಡಿ ಅತ್ತ’ ಎನ್ನುವ ಕಥೆಯ ಕೊನೆಯಲ್ಲಿ ‘ಸಂತೇಲಿ ಮಳೆ ಬಂದಾಗ ಉಪ್ಪಿನೋನು ಅಂತ್ರೆ ತೆಂಗಿನ ಕಾಯೋನು ಉರುಳಾಡಿ ಅತ್ತ’ ಎಂಬ ಗಾದೆಯನ್ನು ಉಲ್ಲೇಖಿಸಲಾಗಿದೆ’ ಹೀಗೆ ಕಪ್ಪು ಬಿಳುಪಿನ ಚಿತ್ರಸಹಿತ ಕಥೆಗಳು ಇಲ್ಲಿವೆ.
ಕನ್ನಡ ಬರಹಗಾರ್ತಿ ಭಾರತೀ ಕಾಸರಗೋಡು ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಮೊದಲನೆಯ ಕೃತಿ ವೀಣೆಯ ನೆರಳಲ್ಲಿ, ಡಾ. ವಿ.ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನವನ್ನು ಕುರಿತದ್ದು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮತ್ತು ಅತ್ತಿಮಬ್ಬೆ ಬಹುಮಾನಗಳು ದಕ್ಕಿವೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತಿಯವರ ಇತರ ಪ್ರಕಟಿತ ಪುಸ್ತಕಗಳು ಚಂದನ (ಪ್ರಬಂಧ ಸಂಕಲನ), ರಾಸದರ್ಶನ (ತಂದೆ ಶ್ರೀ ಸಮೇತನಹಳ್ಳಿ ರಾಮರಾಯರಿಗೆ ಅರ್ಪಿಸಿದ ಅಭಿನಂದನ ಗ್ರಂಥ), ಜೀವಿ: ಜೀವ--ಭಾವ (ವಿದ್ವಾಂಸ ಶ್ರೀ ಜಿ. ವೆಂಕಟಸುಬ್ಬಯ್ಯ ಅವರ ಸಂಕ್ಷಿಪ್ತ ಜೀವನ ಚರಿತ್ರೆ), ಮತ್ತು ಬಂಧಬಂಧುರ (ಸಂಪಾದಿತ ...
READ MORE