ಅಪರಾಧಗಳ ಬೆನ್ನತ್ತಿ

Author : ಡಿ.ವಿ. ಗುರುಪ್ರಸಾದ್

Pages 158

₹ 160.00




Year of Publication: 2022
Published by: ವಿಕ್ರಂ ಪ್ರಕಾಶನ,
Address: # 60, ವಿಕ್ರಂ ಬಿಲ್ಡಿಂಗ್, ಕೆ.ಸಿ ರಾಣಿ ರೋಡ್‌, ಬೆಂಗಳೂರು
Phone: 9740994008

Synopsys

ಅಪರಾಧಗಳ ನಿಗೂಢ ಹಾಗೂ ಭೀಕರ ಜಗತ್ತಿನ ವಿದ್ಯಮಾನಗಳನ್ನು ಸಾಹಿತ್ಯ ಕೃತಿಗಳ ಮೂಲಕ ತೆರೆದಿಡುವ ಖ್ಯಾತಿಯ ಲೇಖಕ ಹಾಗೂ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ್ ಅವರ ಕೃತಿ-ಅಪರಾಧಗಳ ಬೆನ್ನತ್ತಿ. ನೈಜ ಕ್ರೈಂ ಕಥೆಗಳ ಸಂಕಲ ಎಂಬುದು ಲೇಖಕರು ನೀಡಿರುವ ಉಪಶೀರ್ಷಿಕೆ. ತಮ್ಮ ವೃತ್ತಿ ಜೀವನದಲ್ಲಿ ಕಂಡ ಅಥವಾ ತನಿಖೆ ಕೈಗೊಂಡ ಅವಧಿಯಲ್ಲಿಯ ಅಪರಾಧಗಳ ಪ್ರಕರಣಗಳನ್ನು ಇಲ್ಲಿ ಕಥೆಯಾಗಿಸಿದ್ದು, ಇವು ಬದುಕಿನ ತಿರುವುಗಳ ಅನಿವಾರ್ಯತೆಯನ್ನು ತಿಳಿಸುತ್ತವೆ.  ಮಾತ್ರವಲ್ಲ; ಅನುಭವದಿಂದ ಕಲಿಯುವ ಪಾಠಗಳ ಅಗತ್ಯವನ್ನು ಪ್ರತಿಪಾದಿಸುತ್ತವೆ. ತಮ್ಮ ಅಸ್ತಿತ್ವದ ಉಳಿಯುವಿಕೆಗಾಗಿ ಅಪರಾಧಗಳನ್ನು ಮನುಷ್ಯ ಮಾಡುತ್ತಾನೆಯಾದರೂ ಅದನ್ನೇ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಅದು ಆತುರದ ನಿರ್ಣಯವಾಗಿರುತ್ತದೆ ಎಂಬುದನ್ನು ಮನದಟ್ಟು ಮಾಡುವ ರೀತಿಯಲ್ಲಿ ಇಲ್ಲಿಯ ಕಥೆಗಳಿವೆ.

About the Author

ಡಿ.ವಿ. ಗುರುಪ್ರಸಾದ್

ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ.  ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...

READ MORE

Related Books