ಲೇಖಕಿ ಸವಿತಾ ನಾಗಭೂಷಣ ಅವರ ಚೊಚ್ಚಲ ಕಥಾ ಸಂಕಲನ ʼಅಜ್ಜಿ ಕರೆದ ಹಾಗಾಯಿತುʼ. ತಮ್ಮ ಕಥೆಗಳ ಮೂಲಕ ಬಾಲ್ಯವನ್ನು ಬೆಳಗಿಸಿದ ಅಜ್ಜಮ್ಮಂದಿರ ಸಂಪ್ರದಾಯದಿಂದ ಪ್ರೇರಣೆ ಪಡೆದು, ಹೊಸಗಾಲದ ವಸ್ತು-ವಿಚಾರ-ವಿನ್ಯಾಸಗಳನ್ನು ಮನಸ್ಸಲ್ಲಿ ಇಟ್ಟುಕೊಂಡು ಕಟ್ಟಿದ ಮೂವತ್ತು ಕಿರು ಕಥನಗಳು ಇಲ್ಲಿವೆ. ಈ ಕತೆಗಳು ಒಂದೊಂದೂ ಬೇರೆ ಬಗೆಯದೇ ಆಗಿದ್ದರೂ ಇವುಗಳ ನಡುವೆ ಕೆಲವು ಸಾಮ್ಯಗಳೂ ಇವೆ. ಅಂಥ ಒಂದು ಸಮಾನ ಗುಣವೆಂದರೆ ಇಲ್ಲಿಯ ಬಹುತೇಕ ಕತೆಗಳು ಪುಟ್ಟ ಪುಟ್ಟ ಭಾವಗೀತೆಗಳ ಹಾಗಿವೆ. ಇವತ್ತಿನ ಕಾಲದೇಶಗಳಲ್ಲಿ ಇದ್ದೂ ಅದನ್ನು ಮೀರುವ ಹಾಗೂ ಹೇಳಬೇಕಾದ್ದನ್ನು ತಮ್ಮ ಎರಡು ಸಾಲಿನ ನಡುವಿನ ಮೌನದ ಮೂಲಕವೇ ಹೇಳುವ ಆಪ್ತ ಪ್ರಯೋಗ ಈ ಕಥೆಗಳಲ್ಲಿದೆ.
ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್ ...
READ MORE