ಸೈಮನ್ನನ ತಂದೆ

Author : ಪಿ. ವೆಂಕೋಬಾಚಾರ್ಯ

Pages 158

₹ 12.00




Year of Publication: 1951
Published by: ಆನಂದ ಗ್ರಂಥಮಾಲಾ
Address: ಹುಬ್ಬಳ್ಳಿ.

Synopsys

'ಸೈಮನ್ನನ ತಂದೆ' ಕಥಾಸಂಕಲನದಲ್ಲಿ ವಿವಿಧ ಲೇಖಕರ ಕಥೆಗಳಿದ್ದು ಲೇಖಕ ವಿ. ವೆಂಕೋಬಾಚಾರ್ಯ ಅವರು ಸಂಪಾದಿಸಿದ್ದಾರೆ. ಮೊಪಾಸ ಮತ್ತು ಇತರ ಕಥೆಗಳಲು ಎಂಬ ಉಪಶೀರ್ಷಿಕೆಯನ್ನು ಈ ಕೃತಿಯು ಒಳಗೊಂಡಿದೆ. ಈ ಪುಸ್ತಕ್‌ ಪರಿವಿಡಿಯಲ್ಲಿ ಸೈಮನ್ನನ ತಂದೆ, ಸಾವಿನ ಭಯ, ನದಿಯ ಮೇಲೆ ಒಂದಿರಿಳು, ಇಬ್ಬರು ಯೋಧರು, ಪರಿಚಾರಕ, ತಾಯಿ ಮಗ, ಪಾಪ ಆ ಓಲೆ, ಗಿಡದ ನೆರಳಿನಲ್ಲಿ, ಗಾಯದ ನೋವು, ಕಲಾವಿದ, ಹೆಂಡತಿ ಹೇಳಿದ, ತ್ಯಾಗ, ತೊಡಕು, ಮೂರು ತಪ್ಪುಗಳು, ಜಯಳ ಓಲೆಗಳು, ಗುರುನಾಥ, ಐದೇ ನಿಮಿಷ, ಎರಡು ಓಲೆಗಳು, ಆಕೆ ಸತ್ತಳು ಎಂಬ ಕಥೆಗಳನ್ನು ಹೊಂದಿದೆ. ಹೊಸಲೇಖಕರ ಹೊಸಬಗೆಯ ಕಥೆಗಳನ್ನು ಇಲ್ಲಿ ಲೇಖಕರು ಸಂಪಾದಿಸಿ ಪ್ರಸ್ತುತಪಡಿಸಿದ್ದಾರೆ.

About the Author

ಪಿ. ವೆಂಕೋಬಾಚಾರ್ಯ

ಪಿ. ವೆಂಕೋಬಾಚಾರ್ಯರು ಜನಿಸಿದ್ದು 1905ರಲ್ಲಿ. ಅಜ್ಮೀರ್ ಜನರಲ್ ಅಸ್ಯೂರೆನ್ಸ್ ಸೊಸೈಟಿಯ ಹುಬ್ಬಳ್ಳಿಯ ಶಾಖೆಯ ಪ್ರಧಾನ ವ್ಯವಸ್ಥಾಪಕರಾಗಿದ್ದರು. ವಿಧಿ ತಂದ ವಧು (1946), ಕುಲವಿಲ್ಲದ ಹೆಣ್ಣು(1948) ಹಾಗೂ ವೃಂದ (1949) ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಫ್ರೆಂಚ್ ಕಥಾ ಸಾಹಿತ್ಯ ಸಾಮ್ರಾಟ ಎಂದೇ ಖ್ಯಾತಿಯ ಗಾಯ್ ದ ಮೋಪಾಸನ ಕಥೆಗಳನ್ನು ಅರ್ಪಣ, ಸೈಮನ್ನನ ತಂದೆ, ಗಾಯದ ನೋವು ಹೀಗೆ ವಿವಿಧ ಹೆಸರುಗಳಲ್ಲಿ ಪ್ರಕಟವಾಗಿವೆ. ಇವೆತ್-ಈತನ ಕಾದಂಬರಿ. ಹೂವು ಅರಳಿತು-ತೆಲುಗು ಕಥೆಗಳ ಸಂಕಲನ. ತೆಲುಗು ಹಾಸ್ಯ ಕತೆಗಾರ ಮುನಿ ಮಾಣಿಕ್ಯಂ ನರಸಿಂಹರಾಯರ ಕೃತಿಗಳು ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಇವರ ರುಕ್ಮಿಣಿ ಮತ್ತು ...

READ MORE

Related Books