ಲೇಖಕ ಮಲ್ಲಿಕಾರ್ಜುನ್ ಹೊಸಪಾಳ್ಯ ಅವರು ಬರೆದ ಕಥೆಗಳ ಕೃತಿ-ಬೆಲ್ಲಂಪುಲ್ಲಕ್ಕ : ಹಳ್ಳಿಗಾಡಿನ ಸುತ್ತಾಟದ ಕಥನಗಳು’. ಗ್ರಾಮೀಣ ಸೊಡಿನಲ್ಲಿ ಮೈದಾಳಿದ ಎಲ್ಲ ಕಥೆಗಳು ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಹಳ್ಳಿ ಹಳ್ಳಿಗಳನ್ನು ಸುತ್ತಾಡಿದ ಲೇಖಕರು, ತಾವು ಕಂಡುಂಡ ಅನುಭವಗಳಿಗೆ ಕಥನ ರೂಪ ನೀಡಿದ್ದಾರೆ. ಈ ಕಾರಣಕ್ಕೆ, ಲೇಖಕರು ಈ ಕೃತಿಗೆ ‘ಹಳ್ಳಿಗಾಡಿನ ಸುತ್ತಾಟದ ಕಥನಗಳು’ ಎಂದೇ ಉಪಶೀರ್ಷಿಕೆ ನೀಡಿದ್ದಾರೆ. ಬೆಲ್ಲಂಪುಲ್ಲಕ್ಕ ಕಥನವೂ ಸೇರಿದಂತೆ ಇತರೆ ಕಥನಗಳು ಗ್ರಾಮೀಣ ಸಾಂಸ್ಕೃತಿಕ-ಸಾಮಾಜಿಕ ವ್ಯವಸ್ಥೆಯನ್ನು, ಮೌಲ್ಯವನ್ನು ತಿಳಿಸಿಕೊಡುತ್ತವೆ ಮಾತ್ರವಲ್ಲ; ಬದುಕಿನ ಅತಂತ್ರ, ಅಶಾಂತ ಸ್ಥಿತಿಗೆ ನೆಮ್ಮದಿ ನೀಡುತ್ತವೆ ಎಂದೂ ಲೇಖಕರು ಕಥನಗಳ ಮೂಲಕ ತೋರಿದ್ದಾರೆ.
ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಹೊಸಪಾಳ್ಯ. ಮಧುಗಿರಿ, ತುಮಕೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಅವರು ಅರ್ಥಶಾಸ್ತ್ರ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ನೊಂದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳಿಕೆಗಾಗಿ ಚಿನ್ನದ ಪದಕ ಪಡೆದಿದ್ದಾರೆ. ದೇಸಿ ತಳಿ, ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಸಿರಿಧಾನ್ಯ ಚಟುವಟಿಕೆಗಳಿಗೆ ಬೆಂಬಲ. ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ. ಪಾರಂಪರಿಕ ...
READ MORE