ಜನನೀ

Author : ಪ್ರಕಾಶ್‌ ಹೇಮಾವತಿ

Pages 246

₹ 300.00




Year of Publication: 2023
Published by: ಕಾಮಧೇನು ಪುಸ್ತಕ ಭವನ
Address: ಶೇಷಾದ್ರಿಪುರಂ, ಬೆಂಗಳೂರು 560 020
Phone: 9945002444

Synopsys

‘ಜನನೀ’ ಪ್ರಕಾಶ್‌ ಹೇಮಾವತಿ ಅವರ ಕಥಾಸಂಗ್ರಹವಾಗಿದೆ. ಈ ಕಥಾಸಂಗ್ರಹದಲ್ಲಿನ ಕಥೆಗಳಲ್ಲಿ ವೈವಿದ್ಯತೆ ಇದೆ. ಕಾಲ್ಪನಿಕ ಕಥೆಗಳೊಂದಿಗೆ ಸಾಮಾಜಿಕ ಕಳಕಳಿಯ ಕಥೆಗಳು, ನಿಜವಾಗಿ ನೆಡೆದ ಘಟನೆ ಅಥವಾ ಸಂಗತಿಗಳ ಸುತ್ತಾ ಹೆಣೆದ ಕಥೆಗಳು, ಶಿಕಾಗೋ ಮಾಫಿಯಾ ಬಗೆಗಿನ ಕಥೆ ಹಾಗೂ ಪತ್ತೇದಾರಿ ಕಥೆಗಳಿವೆ. ಇವೆಲ್ಲಾ ಕಳೆದ ಇಪ್ಪತೈದು ವರುಷಗಳಲ್ಲಿ ಬರೆದ ಕಥೆಗಳು. ಹಾಗಾಗಿ ಹಲವಾರು ವರುಷಗಳ ಹಿಂದೆ ನೆಡೆದ ಘಟನೆಗಳನ್ನು ಆಧರಿಸಿ ಬರೆದ ಕಥೆಗಳು ಈಗ ಓದುವಾಗ ಪ್ರಸ್ತುತವಲ್ಲ ಎನಿಸಬಹುದು. ಆದರೆ ನಿಜ ಘಟನೆಗಳನ್ನು ಆಧರಿಸಿದ್ದರೂ ಅದರ ಸುತ್ತಾ ಹೆಣೆದಿರುವುದು ಕಾಲ್ಪನಿಕ ಕಥೆ.

About the Author

ಪ್ರಕಾಶ್‌ ಹೇಮಾವತಿ

ಮೂಲತಃ ಬೆಂಗಳೂರಿನವರಾಗಿದ್ದು ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಚರಿತ್ರೆಗಳ ಬಗೆಗೆ ಅಪಾರ ಅಸಕ್ತಿ ಬೆಳೆಸಿಕೊಂಡಿರುವ ಪ್ರಕಾಶ ಹೇಮಾವತಿಯವರು ಬೆಂಗಳೂರಿನ ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜಿನ ವಾಸ್ತುಶಿಲ್ಪ ಶಾಸ್ತದ ಪದವೀಧರರು. ಕಳೆದ ನಲವತ್ತು ವರುಷಗಳಿಂದಲೂ ಅಮೇರಿಕಾದಲ್ಲಿ ನೆಲೆಸಿರುವ ಇವರು ಇದುವರೆಗೆ ಕರ್ನಾಟಕ ಚರಿತ್ರೆಯ ಬಗೆಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇದರೊಂದಿಗೆ ಕಾದಂಬರಿ, ಕಥೆ, ಕವನ, ನಾಟಕಗಳನ್ನು ಸಹ ರಚಿಸಿದ್ದಾರೆ. ಹಲವು ನಾಟಕಗಳನ್ನು ಬರೆದು ಶಿಕಾಗೋ ಹಾಗೂ ಇನ್ನಿತರೆಡೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಕೃತಿಗಳು "ಅಮೋಘವರ್ಷ" , "ಒಬಾಮ", "ಇಮ್ಮಡಿ ಪುಲಿಕೇಶಿ". ...

READ MORE

Related Books