ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರು ಕನ್ನಡದ ಉತ್ತಮ ಕತೆಗಳನ್ನು ಆಯ್ದು, ಸಂಪಾದಿಸಿದ ಕೃತಿ-ಮರೆಯಬಾರದ ಹಳೆಯ ಕತೆಗಳು. ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆಗಳ ರಚನೆ ಪ್ರಕ್ರಿಯೆಯು ತುಂಬಾ ವೈಶಿಷ್ಟ್ಯಪೂರ್ಣ ಹಾಗೂ ವಸ್ತು ವೈವಿಧ್ಯತೆಯಿಂದ ಕೂಡಿದ್ದವು ಎಂಬುದಕ್ಕೆ ಇಲ್ಲಿಯ ಕತೆಗಳು ಕನ್ನಡಿ ಹಿಡಿಯುತ್ತದೆ. ಪ್ರತಿ ಕತೆ ಪೂರ್ಣಗೊಂಡ ನಂತರ, ಸಂಪಾದಕರು ಕತೆಯ ಲೇಖಕರನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ. ಮಾತ್ರವಲ್ಲ; ಕತೆಯ ಕುರಿತು ಬರೆದ ವಿದ್ವತ್ ಪೂರ್ಣ ಟಿಪ್ಪಣಿಗಳು, ಈ ಕತೆಗಳು ಮರೆಯಬಾರದ ಸಾಲಿನಲ್ಲಿರಿಸಿದ ಮಹತ್ವವನ್ನು ತಿಳಿಸುತ್ತವೆ. ಬಹುತೇಕ ಕತೆಗಳ ಲೇಖಕರು ಅಪರಿಚಿತರಿದ್ದು, ಅವರು ಉತ್ತಮ ಕತೆಗಳನ್ನು ಬರೆದಿದ್ದಾರೆ. ಇಂದಿಗೂ ಅವು ತಮ್ಮ ಪ್ರಸ್ತುತತೆಯನ್ನುಸಾಬೀತುಪಡಿಸುತ್ತವೆ. ‘ಮಧ್ಯಮ ವರ್ಗದ ಬ್ರಾಹ್ಮಣ ಸಮಾಜಕ್ಕೆ ಸಂಬಂಧಿಸಿದ ಕತೆಗಳು ಇಲ್ಲಿ ಪ್ರಧಾನವಾಗಿದ್ದು, ನವೋದಯ ಕಾಲವು ಒಂದು ವರ್ಗದ ಪ್ರಭಾವದಲ್ಲಿತ್ತು ಎಂಬುದು ಸ್ಪಷ್ಟ. ಆದರೂ, ಅದನ್ನು ಮೀರುವ ಉದಾರ ಮಾನವತಾವಾದಿ ಜೀವನ ದೃಷ್ಟಿ ಕೆಲಸ ಮಾಡಿದೆ ಎಂದು ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಕೇಳಿರದ ಸಣ್ಣ ಕತೆಗಾರರ ಹೆಸರು ಹಾಗೂ ಅವರ ಶ್ರೇಷ್ಠ ಕತೆಗಳೆಡೆಗೆ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.
ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...
READ MORE