ಅವ್ವ ಮತ್ತು ಸೈಕಲ್

Author : ನಾಗೇಶ್‍ ತಳವಾರ

Pages 136

₹ 100.00




Year of Publication: 2016
Published by: ಸ್ನೇಹ ಬುಕ್ ಹೌಸ್
Address: ನಂ.165, 10ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು-560050

Synopsys

ನಾಗೇಶ್ ತಳವಾರ ಅವರ ಕಥಾ ಸಂಕಲನ ‘ಅವ್ವ ಮತ್ತು ಸೈಕಲ್’- ವೃತ್ತಿಯಿಂದ ಟಿ.ವಿ.ಮಾಧ್ಯಮದಲ್ಲಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿರುವ ನಾಗೇಶ್ ಬಹುಮುಖ ಪ್ರತಿಭೆ. ಅವರ 'ಅವ್ವ ಮತ್ತು ಸೈಕಲ್' ಕಥಾ ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಸಂಕಲನಕ್ಕೆ ಇಟ್ಟ ಹೆಸರಿನ ಕಥೆಯೂ ಇಲ್ಲಿ ಸೇರಿದೆ. ನಮ್ಮ ಬದುಕಿನ ಸೂಕ್ಷ್ಮತೆ, ಅಸಹಾಯಕತೆ ಮತ್ತು ಬಡತನವನ್ನು ಇಲ್ಲಿನ ಕಥೆಗಳು ಸಂಕೇತಿಸುತ್ತವೆ. ನಾಗರೀಕ ಜಗತ್ತಿಗೆ ಸೈಕಲ್ ಪ್ರವೇಶ ಮಾಡಿದ ಬಗೆಗೆ ಹಲವಾರು ಕಥೆಗಳು ವಿವಿಧ ನೆಲೆಗಳಲ್ಲಿ ಈಗಾಗಲೇ ಬಂದಿವೆ. ಮಾಧ್ಯಮಗಳಲ್ಲೂ ಸೈಕಲ್ ಬೇರೆ ಬೇರೆ ಸಂಕೇತಗಳಾಗಿ ಹೊರಡುವುದುಂಟು.

ಈ ಕತೆಯ ಹುಡುಗನಿಗೆ ಚಿಕ್ಕಂದಿನಿಂದಲ್ಲೇ ಸೈಕಲ್ ಹುಚ್ಚು. ಅದನ್ನು ಹೇಗಾದರೂ ಪಡೆಯಬೇಕೆಂಬ ಹಂಬಲ ಅವನದು. ಮನೆಯಲ್ಲಿ ತುತ್ತಿಗೂ ತತ್ವಾರ. ಆದರೆ, ಅವ್ವ ಮಗನ ಬೇಡಿಕೆಯನ್ನು ಸಹಿಸಲಾರದೆ ಪೇಟೆಯಿಂದ ಸೈಕಲ್ ತಂದು ಕೊಡುತ್ತಾಳೆ. ಮಗನ ಸಂತಸ ಅದರಿಂದಾಗುವ ಸಮಸ್ಯೆಯನ್ನು ವಿವರಿಸುವ ಇಡೀ ಕಥೆ ಓದಿಸಿಕೊಂಡು ಹೋಗುತ್ತದೆ. ಇಡೀ ಸಂಕಲನದಲ್ಲಿ ಇಂಥಾದ್ದೆ ಸೂಕ್ಷ್ಮ ವಿಷಯನನ್ನೊಳಗೊಂಡ ವಿಭಿನ್ನ ಕಥೆಗಳಿವೆ.

About the Author

ನಾಗೇಶ್‍ ತಳವಾರ
(16 April 1987)

ನಾಗೇಶ್ ತಳವಾರ ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ 16-04-1987 ರಲ್ಲಿ ಜನಿಸಿದರು. ನಾಗೇಶ್ ಶಂಕ್ರಮ್ಮಾ ಮಾದೇವ ತಳವಾರ ಇವರ ಪೂರ್ತಿ ಹೆಸರು. ಬಾಲವಾಡಿಯಿಂದ ಹೈಸ್ಕೂಲ್ ವರೆಗಿನ ಓದು ಸಿಂದಗಿಯಲ್ಲಿ ಮುಗಿಸಿದ್ರು. ಮುಂದಿನ ಓದು ವಿದ್ಯಾಕಾಶಿ ಧಾರವಾಡದಲ್ಲಿ ಆರಂಭಿಸಿ ಅಲ್ಲಿಯೇ ಎಂ.ಎ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಮುಗಿಸಿದ್ದಾರೆ. ಬರವಣಿಗೆ, ನಾಟಕ, ಡ್ಯಾನ್ಸ್ ಅನ್ನೋದು ಇವರಿಗೆ ಧಾರವಾಡ ನೆಲದ ಮಣ್ಣಿನಿಂದ ಮೈ ಮನಕ್ಕೆ ಮೆತ್ತಿಕೊಂಡಿದೆ. ನಾಲ್ಕೈದು ವರ್ಷಗಳ ಕಾಲ ಡ್ಯಾನ್ಸ್ ನಾಟಕ ಅಂತ ಅಲೆದಾಡಿದ್ದಾರೆ. ಹೀಗಾಗಿ ಕಾಲೇಜು ಜೀವನಕ್ಕೆ ಒಂದಿಷ್ಟು ಚಕ್ಕರ್ ಹಾಕಿದ್ರು. ಇದೆಲ್ಲಾ ಆದ್ಮೇಲೆ ...

READ MORE

Related Books