ಉಲ್ಟಾ ಅಂಗಿ

Author : ತಮ್ಮಣ್ಣ ಬೀಗಾರ

Pages 100

₹ 90.00




Year of Publication: 2019
Published by: ಪ್ರೇಮ ಪ್ರಕಾಶನ
Address: #90, ಬೆಳಕು, ವಿವೇಕಾನಂದ ಬ್ಲಾಕ್‌ ಟೀಚರ್‍ಸ್‌ ಲೇಔಟ್‌, ಮೈಸೂರು - 5700029
Phone: 9886026085

Synopsys

ತಮ್ಮಣ್ಣ ಬೀಗಾರ ಅವರ ಉಲ್ಟಾ ಅಂಗಿ- ಕಥಾ ಸಂಕಲನದಲ್ಲಿ ಮಲೆನಾಡಿನ ಪರಿಸರದ ಗ್ರಾಮೀಣ ಮಕ್ಕಳ ವಾಸ್ತವ ಬದುಕನ್ನು ತೆರೆದಿಡುತ್ತದೆ. ಫ್ಯಾಂಟಸಿಯಲ್ಲಿ ವೈಜ್ಞಾನಿಕ ವಿಚಾರಗಳನ್ನು ಮಕ್ಕಳಿಗೆ ತಲುಪಿಸುವ ಹಂಬಲ ಹೊಂದಿರುವುದನ್ನು ಕಥೆಗಳಲ್ಲಿ ಕಾಣಬಹುದು. ವಾಸ್ತವ ಮತ್ತು ವೈಚಾರಿಕತೆಯನ್ನು ಕಥೆಗಳ ಮೂಲಕ ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ನಿರೂಪಿಸಿದ್ದಾರೆ.

ಒಟ್ಟು 15 ಕಥೆಗಳನ್ನು ಹೊಂದಿರುವ ಈ ಕೃತಿಯಲ್ಲಿ ಯಾರು ಕೊಟ್ಟಿದ್ದು, ಹೀಗೂ ಆಗುತ್ತದೆ. ಉಲ್ಟಾ ಅಂಗಿ, ಕೆರೆಯಲ್ಲಿ ಮುಳುಗಿಸೋ ಹಾಗಿಲ್ವಾ, ಅಜ್ಜಿ ಮತ್ತು ಎಲೆ, ಗೀಜಗನ ಗೂಡಿನಿಂದ ಗೀಜಗನ ಮರಿ ಹೊರಬಂತು, ರಾಡಿ ಅಂಗಿ, ರಾಜಣ್ಣನ ಹಾಗೆ, ಏನಾಯ್ತು, ನಮ್ಮ ಹಿಂದೇ ಹೊರಟಿದ್ದರು, ಯಾರ ತಪ್ಪು, ಎಲ್ಲಾ ಮರೆತು, ಆಣೆ ಕಟ್ಟು, ಅಜ್ಜನಾಗುವವರೆಗೂ, ಹೊಳೆಯುವ ಕಲ್ಲು ಹೀಗೆ ಹದಿನೈದು ಕತೆಗಳನ್ನು ಹೊಂದಿರುವುದನ್ನು ಈ ಪುಸ್ತಕದ ಪರಿವಿಡಿಯಲ್ಲಿ ಗಮನಿಸಬಹುದು. ಇಲ್ಲಿನ ಕಥೆಗಳು ಸಾಂಧರ್ಭಿಕ ಚಿತ್ರಗಳನ್ನು ಒಳಗೊಂಡಿರುವುದು ಈ ಕಥಾಸಂಕಲನದ ಮತ್ತೊಂದು ವಿಶೇಷ. 

 

About the Author

ತಮ್ಮಣ್ಣ ಬೀಗಾರ
(22 November 1959)

ಕತೆಗಾರ ತಮ್ಮಣ್ಣ ಬೀಗಾರ  ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ.  ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ...

READ MORE

Related Books