ಪ್ರಮೋದ ಮೋಹನ್ ಹೆಗಡೆ ಅವರ ಚೊಚ್ಚಲ ಕೃತಿ ಮೈಸೂರ್ ಪಾಕ್ ಹುಡುಗ. ಈ ಕಥಾ ಸಂಕಲನದಲ್ಲಿ ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಅವರ ಬೆನ್ನುಡಿ ಹಾಗೂ ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ ಮುನ್ನುಡಿಯ ಮಾತುಗಳಿವೆ.
ಬೆನ್ನುಡಿಯಲ್ಲಿ ಕುಂಟಿನಿ ಅವರು ಹೇಳುವಂತೆ, ಓದದೆಯೂ ಬರೆಯಬಹುದಾದ ಕಾಲದಲ್ಲಿ ಓದಿ, ಓಡಿ,ತಿರುಗಾಡಿ, ತಿಳಿದುಕೊಂಡು ಬರೆಯುವ ಹೊಸ ಹುಡುಗ ಹುಡುಗಿಯರು ಅಲ್ಲಲ್ಲಿ ಕಾಣುತ್ತಿದ್ದಾರೆ. ಇದು ಕನ್ನಡ ಸಾಹಿತ್ಯದ ಅದೃಷ್ಟ.ಇಂಥ ಟೀಂ ಗೈಸ್ ನಲ್ಲಿ ಕಾಣುತ್ತಿರುವವರು ಪ್ರಮೋದ ಮೋಹನ ಹೆಗಡೆ ಅಲಿಯಾಸ್ ಪದಚಿಹ್ನ. ಪ್ರಮೋದ್ ಕುಮಟಾದ ಹಳ್ಳಿಯ ಹುಡುಗ. ಬೆಳೆದದ್ದು ಮಹಾನಗರದಲ್ಲಿ. ಬಾಲ್ಯದಿಂದಲೇ ಅಲೆಮಾರಿ. ಕುಳಿತಲ್ಲಿ ಕೂರದ ಹುಡುಗನ ಕಣ್ಣಲ್ಲಿ ಸದಾ ಮಿಂಚು. ಊರಂತೂರ ಅಲೆದು ಪಡೆದ ಅನುಭವವೇ ಅವರ ಕತೆಗಳು. ಹೀಗಾಗಿ ಈ ಕೃತಿ ಪದಚಿಹ್ನನ ಕತೆಗಳು! ಪ್ರಮೋದ್ ಹೇಳುತ್ತಿರುವ ಕತೆಗಳು ಜನರೇಶನ್ W ನಿಂದ Z ತನಕದ್ದು. ಇದಕ್ಕೆ ತಕ್ಕಂತೆ ಸುಲಲಿತವಾಗಿ ಒಗ್ಗಿಕೊಂಡ ಭಾಷೆ ಈ ಕತೆಗಳ ಶಕ್ತಿವರ್ಧಕ. ತಂತ್ರಗಳು ಹೊಸತೇನಲ್ಲ, ಪಾತ್ರಗಳು ನಮ್ಮ ನಿಮ್ಮವೇ. ನಿರೂಪಣೆಯಲ್ಲಿ ಎಡತಾಕುಗಳಿಲ್ಲ. ಒಂದು ಕಾಲಾಂತರದತ್ತ ಇಲ್ಲಿನ ಅನೇಕ ಕತೆಗಳು ಸಾಗುತ್ತಿರುವಂತೆ ಭಾಸವಾಗುತ್ತಿದೆ. ಓದುಗರು ಚಕ್ಕಳಬಕ್ಕಳ ಹಾಕಿ ಕುಳಿತು, ಒಂದು ಮುಷ್ಠಿ ಕಡ್ಲೆಕಾಯಿ ಜೊತೆ ಓದಿ ಅನುಭವಿಸಬಹುದಾದ ರುಚಿಯನ್ನೂ ಈ ಕತೆಗಳು ಕೊಡುತ್ತಿವೆ.
ಪದಚಿಹ್ನ ಎಂಬ ಕಾವ್ಯನಾಮ ಹೊಂದಿರುವ ಇವರು ಹುಟ್ಟಿದ್ದು ಮಲೆನಾಡಿನ ಸುಂದರ ಊರು ತೀರ್ಥಹಳ್ಳಿಯಲ್ಲಿ ಮತ್ತು ಬೆಳೆದಿದ್ದು ಕರಾವಳಿಯ ಕುಮಟಾದಲ್ಲಿ. ಬೆಂಗಳೂರೆಂಬ ಮಾಯಾನಗರಿಯಲ್ಲಿ ಪ್ರಸ್ತುತ ವಾಸ. ಇಂಜಿನಿಯರಿಂಗ್ ಓದಿ ಪ್ರಸ್ತುತ ಪತ್ರಿಕೋದ್ಯಮದಲ್ಲಿ ವೃತ್ತಿ, ಅದಕ್ಕೆ ಕಾರಣ ಬರವಣಿಗೆಯ ಮೇಲಿರುವ ಪ್ರೀತಿ. ಕಲೆ, ಸಾಹಿತ್ಯ, ರಂಗಭೂಮಿ, ಮಾತುಗಾರಿಕೆ, ಹಾಸ್ಯ, ಎಲ್ಲದರಲ್ಲೂ ಅಪಾರ ಆಸಕ್ತಿ. ಸಮಾಜಮುಖಿ ಕೆಲಸಗಳನ್ನು ಮಾಡಲು ಪರಹಿತಮ್ ಫೌಂಡೇಶನ್ ಎಂಬ ಎನ್ ಜಿ ಓ ಸ್ಥಾಪನೆ. ಒಳ್ಳೆಯ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು, ಬೈಕ್ ರೈಡಿಂಗ್, ಅಲೆಮಾರಿಯ ಬದುಕು ಇಷ್ಟ. ಕೃತಿ: ಮೈಸೂರ್ ಪಾಕ್ ಹುಡುಗ ...
READ MORE