‘ಮಧ್ಯವರ್ತಿ’ ಹಿರಿಯ ಸಾಹಿತಿ ದೊಡ್ಡರಂಗೇಗೌಡರ ಕತಾಸಂಕಲನ. ಇಲ್ಲಿಯ ಕಥೆಗಳು ಅನುಭವದ ವಿಶಾಲ ವ್ಯಾಪ್ತಿಯನ್ನು ಸೂಚಿಸುತ್ತವೆ. ದೊಡ್ಡರಂಗೇಗೌಡರಿಗೆ ತಮ್ಮ ಸುತ್ತುಮುತ್ತಿನ ಸಮಾಜದ ಎಲ್ಲ ಮುಖಗಳ ಬಗೆಗೆ ಕೌತುಕವಿದೆ’ ಎನ್ನುತ್ತಾರೆ ಹಿರಿಯ ಲೇಖಕ ಈಶ್ವರಚಂದ್ರ.
ಈ ಕೃತಿಯಲ್ಲಿ ಮಧ್ಯವರ್ತಿ, ನಿಲುವು, ದಿಟ್ಟ ಹೆಜ್ಜೆ, ಆಮಿಷ, ಜವರಾಯ ಬಂದರೆ, ಆದರ್ಶ ಮತ್ತು ವಾಸ್ತವ, ಕಿಚ್ಚು, ಆಸಕ್ತಿ, ವಡ್ಡರ ಹಟ್ಟಿ ಗಿಡ್ಡ ತಿಮ್ಮಕ್ಕ, ಕಗ್ಗಲೀಪುರದ ಕಾವೇರಮ್ಮ, ಒಲುಮೆ ಎಂಬ ಚಿಲುಮೆ, ಅಪಾರ್ಥ, ಹಸಿವು, ಗೋಲ್ ಮಾಲ್ ಗಂಗಾಧರ್, ಲಕ್ಷ್ಯ, ನಾಯಿ ಕೊಡೆಗಳು, ಅಳಿಲು ಮತ್ತು ಕನ್ನಡ, ಕಲಾಪ್ರೀತಿ, ಬದಲಾವಣೆಯ ಬೀಸುಗಾಳಿ, ಇದು ಪವಾಡವಲ್ಲ: ಬಾನುಲಿ, ಜಾಲಿ ಸೀಮೆ ಜಿಗಣೆ, ಯೋಗಾಯೋಗ, ಆರೋಹಣ, ನಿಲ್ಲದ ತಲ್ಲಣಗಳು, ತೌರು ತೊರೆವ ಮೇಲೆ, ಮೂವರು ಮಿತ್ರರು, ಮಾಡಿದ್ದುಣ್ಣೋ..ಮಹಾರಾಯ, ಜೀವನ ರೂವಾರಿ, ಪ್ರೀತಿಯ ಕಡಲಾಳವ ಯಾರು ಬಲ್ಲರೋ, ಸಹವಾಸ, ಕ್ರಾಂತಿಕಾರಿ, ಬೇಟೆಗಾರ, ಜಯಭೇರಿ ಹೊಡೆದ ಜಂಭೋ, ಗುಂಗು, ಗೋಸುಂಬೆಗಳು, ಅಜ್ಜಿಯ ಸಾವು, ಪ್ರತಿಭಟನೆ, ಭಯೋತ್ಪಾದಕ, ತಾನೊಂದು ಬಗೆದರೆ, ದ್ರೋಹ, ಅಜ್ಜಿಯ ಆತಂಕ, ಅಪ್ಪ ಹಾಕಿದ ಆಲದ ಮರ, ಒಬ್ಬ ಶಿಲ್ಪಿಯ ಸುತ್ತ, ಕುರುಡು ಕಾಂಚಾಣ ಕುಣಿಯುತಲಿತ್ತು, ತಿರುಗಿಬಿದ್ದ ತರುಣ, ತಿರುಗುಬಾಣ, ದೊಡ್ಡಮ್ಮ ಅಲೆಗಳು ಹೀಗೆ 48 ಕತೆಗಳು ಸಂಕಲನಗೊಂಡಿವೆ.
ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್.ಎಲ್.ಎನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...
READ MORE