ಕವಿ, ಕತೆಗಾರ, ಪ್ರಬಂಧಕಾರ, ವಾಸ್ತುಶಿಲ್ಪಿ ನಾಗರಾಜ ವಸ್ತಾರೆ ಅವರ ಸಣ್ಣ ಕತೆಗಳ ಸಂಗ್ರಹ ಕೃತಿ ’ನಿರವಯವ’.
ಒಬ್ಬ ಆರ್ಕಿಟೆಕ್ಟ್ ಆದ ಕಥೆಗಾರನೆ ನಾಯಕನಾಗಿರುವುದು ಇಲ್ಲಿರುವ ಕತೆಯ ವಿಶೇಷವಾಗಿದೆ. ಅದೇ ಎಲ್ಲಾ ಕಥೆಗಳಲ್ಲೂ ಕಂಡುಬರುತ್ತದೆ. ಮುಖ್ಯವಾಗಿ ಈ ಕತೆಗಳು ನಗರವಾಸಿಗಳ ಕತೆಗಳು. ನಾಯಕ ಮಾತ್ರ ಇರುವ, ನಾಯಕಿಯರೇ ಇಲ್ಲದ ಕತೆಗಳು. ಒಂದೆರಡು ಕಥೆಗಳನ್ನು ಹೊರತುಪಡಿಸಿ, ಹೆಚ್ಚಿನೆಲ್ಲಾ ಕಥೆಗಳು ಏಕತಾನೆಯಿಂದ ಕೂಡಿರುವಂತಿವೆ. ಹಾಗಾಗಿ ಹೆಚ್ಚು ಕಾಲ ಕಾಡುವುದಿಲ್ಲ. ಇದರರ್ಥ ಇಷ್ಟ ಆಗಲಿಲ್ಲ ಎಂದಲ್ಲ, ಇವೆಲ್ಲಾ ಓದುವ ಆ ಒಂದು ಘಳಿಗೆಗಷ್ಟೇ ಹೊಳೆದು, ಗ್ರಾಹ್ಯಕ್ಕೆ ಸಿಗುವಂತವು. ಕಾಲಾತೀತವಾಗಿ ನೆನಪಲ್ಲಿ ಉಳಿಯುವಂತಿಲ್ಲ. ಕತೆಗಳ ನಿರೂಪಣೆಯ ಬಗ್ಗೆ ಹೇಳುವುದಾದರೆ, ಲೇಖಕರು ಬಳಸಿರುವ ಉಪಮೆಗಳು, ರೂಪಕಗಳು ವಿಶಿಷ್ಟವಾಗಿವೆ ಎನ್ನಬಹುದು.
ನಾಗರಾಜ ವಸ್ತಾರೆ ಅಂತಲೇ ಪರಿಚಿತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಹೆಸರಿನಲ್ಲಿ ಇವರ ಅಂಕಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಸ್ತಾರೆ ಅವರ ಪ್ರಮುಖ ಕೃತಿಗಳೆಂದರೆ ತೊಂಬತ್ತನೇ ಡಿಗ್ರಿ, ಅರ್ಬನ್ ಪ್ಯಾಂಥರ್‍ಸ್, ನಿರವಯವ ಮುಂತಾದವು.ಇವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ...
READ MORE