`ಕೃಷ್ಣಚಂದರ ಕಥೆಗಳು’ ಪಂಚಾಕ್ಷರಿ ಹಿರೇಮಠ ಅವರ ಕಥಾಸಂಕಲನವಾಗಿದೆ. ಉರ್ದು ಸಾಹಿತ್ಯದ ಅದ್ವಿತೀಯ ಬರಹಗಾರ ಕ್ರಷ್ಣಚಂದರ್ ಕಥೆಳ್ಳಾ ಬಡವರ ಬದುಕಿನ ಪ್ರತಿಕ್ಷಣಗಳೂ ಅಪಾರ ವೇದನೆಯೂ ದಾಖಲಾಗಿದೆ.
ಪಂಚಾಕ್ಷರಿ ಹಿರೇಮಠ ಅವರು 1933ರ ಜನೆವರಿ 6 ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿಯಲ್ಲಿ ಜನಿಸಿದರು. ತಾಯಿ ಬಸಮ್ಮ; ತಂದೆ ವೇದಮೂರ್ತಿ ಮಲಕಯ್ಯ. 2 ವರ್ಷದವರಿದ್ದಾಗ ಪಂಚಾಕ್ಷರಿ ತಮ್ಮ ತಂದೆಯನ್ನು ಕಳೆದುಕೊಂಡರು. ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ, ನಂತರ ಕೊಪ್ಪಳಕ್ಕೆ ಬಂದರು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳ್ವಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳುತ್ವದಲ್ಲಿ ಹೈ-ಕ ವಿಮೋಚನಾ ಚಳವಳಿ ಆರಂಭವಾಗಿತ್ತು. ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಅವರು ಕೊಪ್ಪಳ, ಕಲಬುರಗಿ ಸುತ್ತಾಡಿ ಕೊನೆಗೆ ಧಾರವಾಡಕ್ಕೆ ಬಂದರು. ಅವರು ಸ್ವಾಧ್ಯಾಯ ಬಲದಿಂದಲೇ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ...
READ MOREಹೊಸತು-2002-ಏಪ್ರಿಲ್
ಉರ್ದು ಸಾಹಿತ್ಯದ ಅದ್ವಿತೀಯ ಬರಹಗಾರ ಕೃಷ್ಣಚಂದ ಕಥೆಗಳಲ್ಲಿ ಬಡವರ ಬದುಕಿನ ಪ್ರತಿಕ್ಷಣಗಳೂ ಅಪಾರ ವೇದನೆಯೂ ದಾಖಲಾಗಿದೆ. ಒಬ್ಬ ಮಾನವತಾವಾದಿಯ ಅಸಾಧಾರಣ ಕಳಕಳಿ ಇದೆ. ದೇಶವಿದೇಶಗಳ ವಿವಿಧ ಭಾಷೆಗಳಿಗೆ ಅವರ ಕಥೆಗಳು ಅನುವಾದಗೊಂಡಿವೆ. ಅಂದಿನ ಸೋವಿಯೆತ್ ರಷ್ಯಾ ಒಂದರಲ್ಲೇ ಅವರ ಕೃತಿಗಳ ಮಾರಾಟ14ಲಕ್ಷ ಪ್ರತಿಗಳು ಎಂದರೆ, ಅವರ ಹಾಗೂ ಅವರ ಕೃತಿಗಳ ಬಗ್ಗೆ ಎಲ್ಲವನ್ನೂ ಹೇಳಿದಂತೆಯೇ !