ತಾನು ಬದುಕಿದ ಸಮುದಾಯದ ಒಡಲಾಳವನ್ನು ಅಪ್ಪಟ ರೈತಾಪಿ ಭಾಷೆಯಲ್ಲಿ ಕತೆಯಾಗಿಸುವ ಎ. ಆರ್. ಪಂಪಣ್ಣ ಒಬ್ಬ ಅಪ್ಪಟ ದೇಶಿ ಕಥೆಗಾರರು. ನಿಸರ್ಗ ಮತ್ತು ಉಳಿಮೆಗಾರರ ಜೀವಸಂಬಂಧದ ತಂತು ಅವರ ಎಲ್ಲಾ ಕತೆಗಳಲ್ಲಿ ಒಳಜಲವಾಗಿ ಆವರಿಸಿಕೊಂಡಿದೆ. ಎಡಪಂಥೀಯ ಪಕ್ಷದ ಸಕ್ರಿಯ ಕಾರ್‍ಯಕರ್ತರಾಗಿ ಸಮಾಜದ ಕೆಳಮಟ್ಟದ ಜನರ ಜೊತೆ ಬೆರೆತು ಕತ್ತಲಿರುವ ಹಾದಿಯಲ್ಲಿನ ದೀಪದ ಹಾಗೆ ಜೀವಿಸಿರುವ ಪಂಪಣ್ಣ ಆ ಬದುಕು ದಕ್ಕಿಸಿಕೊಟ್ಟ ನೋವು, ಸಂಕಟ, ಜೀವನೋತ್ಸಾಹದ ಎಳೆಗಳನ್ನಿಟ್ಟುಕೊಂಡು ಕತೆ ಬರೆದಿದ್ದು ಈ ಸಂಕಲನದಲ್ಲಿ ಬೇಯುವ ಉಸಿರಿನ ಗುರುತುಗಳಾಗಿ ಉಳಿದುಕೊಂಡಿವೆ.
ಹೆಚ್ಚು ಶಾಲಾ ಓದಿಲ್ಲದ ಪಂಪಣ್ಣ ಸಮಾಜವನ್ನೇ ಶಾಲೆಯಾಗಿಸಿಕೊಂಡು ತನ್ನನ್ನು, ಸಮಾಜವನ್ನು ಅರಿಯಲು ಪ್ರಯತ್ನಿಸಿದ್ದು ಈ ಕತೆಗಳನ್ನು ಓದಿದಾಗ ಸಹಜವಾಗಿ ನಮ್ಮ ಅರಿವಿಗೆ ಬರುತ್ತದೆ. ಗ್ರಾಮಾಂತರ ಜೀವನದ ಒಳನೋಟ ಕಟ್ಟಿಕೊಡುವ ಹುಕಿ ಇಲ್ಲಿದೆ. ಪಕ್ಕಾ ರೈತಾಪಿ ಕಥನಗಾರಿಕೆ ಇಲ್ಲಿರುವದನ್ನು ಸಂಕಲನ ಬಿಚ್ಚಿಡುತ್ತದೆ. ಹೀಗಾಗಿ ಇಲ್ಲಿಯ ಕತೆಗಳನ್ನು ನೋಡುವ ದೃಷ್ಟಿ ಈಗಿರುವುದಕ್ಕಿಂತ ಭಿನ್ನವಾಗಿರಬೇಕಾಗಿದೆ. ಈತನಕ ಉಪೇಕ್ಷಿತವಾಗಿರುವ ಜನಸಮುದಾಯದ ತಲ್ಲಣಗಳು ಈ ಕತೆಗಳ ಮೂಲಕ ಓದುಗರಿಗೆ ಹೊಸ ಕಣ್ಣು ಕೊಡುತ್ತವೆ.
ಎ.ಆರ್. ಪಂಪಣ್ಣ ಅಪ್ಪಟ ರೈತಾಪಿ ಭಾಷೆಯಲ್ಲಿ ಕತೆಯಾಗಿಸುವ ಎ.ಆರ್. ಪಂಪಣ್ಣ ಒಬ್ಬ ಅಪ್ಪಟ ದೇಶಿ ಕಥೆಗಾರರು. ಇವರ ಬೇಯುವ ಉಸಿರಿನ ಗುರುತು ಕೃತಿಯು ಹಲವಾರು ರೈತಾಪಿ ಕಥನಗಾರಿಕೆಯನ್ನು ತೆರೆದಿಡುವಂತದ್ದು. ಮಾಮರವೇ ಮಾಮರವೇ ಇವರ ಮೂರನೇ ಪುಸ್ತಕವಾಗಿದ್ದು ಮೊದಲನೇ ಪ್ರಬಂಧ ಸಂಕಲವೂ ಆಗಿದೆ. ...
READ MORE