ಖ್ಯಾತ ಲೇಖಕ-ಚಿಂತಕ ಗುರುಪಾದ ಬೇಲೂರು ಅವರ ಕೃತಿ-ಬರ್ಬರಿಕ. ಮಹಾಭಾರತದ ಒಂದು ಪಾತ್ರವಿದು. ದುರ್ಬಲರ ಪರ ಇರುವೆನೆಂದು ಬರ್ಬರಿಕ ತನ್ನ ತಾಯಿಗೆ ಮಾತು ಕೊಟ್ಟಿರುತ್ತಾನೆ. ಆತನು ಅರ್ಜುನನಂತೆ ಧೀರ. ಕರ್ಣನ ಹಾಗೆ ಮಾತು ತಪ್ಪದವ. ಇಷ್ಟಾದರೂ ಶ್ರೀಕೃಷ್ಣನು ಮಹಾಭಾರತ ಯುದ್ಧದಲ್ಲಿ ಆತನನ್ನು ಕೊಲ್ಲುತ್ತಾನೆ. ಬರ್ಬರಿಕನು ಕೃಷ್ಣನ ಆರಾಧಕನೂ ಹೌದು. ಇಂತಹ ಕಥೆಯನ್ನು ಆಧರಿಸಿ, ಕೇವಲ ಬರ್ಬರಿಕ ಪಾತ್ರವನ್ನು ಕೇಂದ್ರೀಕರಿಸಿ ರಚಿಸಿದ ಕಥೆ ಇದು. ಸಂಕಲನದ ವಿವಿಧ ಕಥೆಗಳು ತಮ್ಮದೇ ಆದ ವಸ್ತುವಿಶೇಷತೆಯಿಂದ, ನಿರೂಪಣಾ ಶೈಲಿಯಿಂದ ಗಮನ ಸೆಳೆಯುತ್ತವೆ.
’ಗುರುಪದಾ ಬೇಲೂರ’ ಶ್ರೀ ಗುರುಪದಾಸ್ವಾಮಿ ಬಿ ಜಿ ಅವರ ಕಾವ್ಯನಾಮ. ವೃತ್ತಿಯಿಂದ ಸರ್ಕಾರಿ ಇಂಜಿನಿಯರ್ ಆಗಿರುವ ಗುರುಪಾದ ಸ್ವಾಮಿಯವರ ಹಲವು ಸಣ್ಣ ಕಥೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಅವರು ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತ್ ಮಟ್ಟಕ್ಕೆ ಅಧಿಕಾರಗಳನ್ನು ವಿಕೇಂದ್ರೀಕರಣ ಮಾಡುವ ಹಿಂದಿನ ಉಪಕ್ರಮಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರು ಗ್ರಾಮೀಣ ಸಂಪರ್ಕ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿದ್ದರು. ಅವರು ವಾಟರ್ ಸೆಕ್ಟರ್ನಲ್ಲಿ ಕೆಲಸ ಮಾಡಿದ್ದಾರೆ ಮತ್ತು ಇಂಟಿಗ್ರೇಟೆಡ್ ವಾಟರ್ ಸಂಪನ್ಮೂಲ ನಿರ್ವಹಣಾ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ಪಾತ್ರ ವಹಿಸಿದ್ದಾರೆ. ಗುರುಪಾದ ಸ್ವಾಮಿಯವರು ತನ್ನ ಕೆಲಸದ ಅನುಭವಗಳನ್ನು ...
READ MORE