ಲೇಖಕ ಹುಲಿಕಟ್ಟಿ ಚನ್ನಬಸಪ್ಪ ಅವರ ಕತಾ ಸಂಕಲನ ‘ಹೆಣದ ಮೇಲೆ’. ಈ ಕೃತಿಯಲ್ಲಿ ದೆವ್ವ ಹಿಡಿದ ಹುಡುಗಿ, ಹಣ್ಣು ಮಾರುವವಳು, ಹಸಿದ ಹೊಟ್ಟೆ, ಹೆಣದ ಮೇಲೆ, ಕಸ, ಕೆಡವಿದರು, ಮೊದಲ ಬಲಿ, ನಂಬಿ ಕೆಟ್ಟವರು, ನಿಮ್ ದಯೆ ಸ್ವಾಮಿ, ಪ್ರತಿಷ್ಠೆ, ರಂಗಮ್ಮನ ಕನಸು, ಸಂಬಳ, ಸೂರ್ಯ ಚೆಲ್ಲಿದ ಬೆಳಕು, ನಂಟು ಸೇರಿದಂತೆ ಒಟ್ಟು ಹದಿನಾಲ್ಕು ಕಥೆಗಳಿವೆ.
ಕೃತಿಗೆ ಬೆನ್ನುಡಿ ಬರೆದ ಸಿ.ವಿ. ಪಾಟೀಲ್, ‘ಎಲ್ಲಾ ಕಥೆಗಳು ಗ್ರಾಮೀಣ ದೈನಂದಿನ ಬದುಕಿನ ಸಂದರ್ಭಗಳನ್ನೇ ವಸ್ತುವಾಗಿಸಿಕೊಂಡು ಬರೆದ ಕಥೆಗಳಾಗಿವೆ. ಇದಕ್ಕೆ ಕಾರಣ ಲೇಖಕರ ಹುಟ್ಟು, ಬಾಲ್ಯಜೀವನ ಹಾಗೂ ವೃತ್ತಿ ಜೀವನವೂ ಗ್ರಾಮೀಣ ಪರಿಸರದಲ್ಲಿ ಆಗಿರುವುದರಿಂದ ಸಹಜವಾಗಿಯೇ ಇವರ ಸಂವೇದನೆ ಅಲ್ಲಿನ ಕಥೆ-ವ್ಯಥೆಗಳು ಆ ಭಾಷೆಯಲ್ಲೇ ಅಭಿವ್ಯಕ್ತಿಗೊಂಡಿದೆ. ಇಲ್ಲಿನ ಬಹುತೇಕ ಕಥೆಯ ನಾಯಕರು ಗ್ರಾಮೀಣ ಮೂಲದವರೇ ಆಗಿದ್ದಾರೆ. ಹಸಿವು, ಬಡತನ, ಅನ್ಯಾಯ, ದರ್ಪ ಹಾಗೂ ದಬ್ಬಾಳಿಕೆಗಳನ್ನು ವಿರೋಧಿಸುತ್ತಲೇ ಹೊಸ ಸಮಾಜದ ಆಶಯಗಳನ್ನು ಹೊತ್ತವರಾಗಿದ್ದಾರೆ. ಈ ಹೋರಾಟಗಳಿಗೆ ತಾತ್ವಿಕರೂಪ ಇಲ್ಲದೇ ಹೋದರೂ ಪ್ರತಿಭಟನೆಯ ಕಾರಣಕ್ಕೆ ಪ್ರಾಮುಖ್ಯ ಪಾತ್ರಗಳಾಗಿ ಕಾಣಿಸುತ್ತವೆ. ಎಲ್ಲಾ ಕಥೆಯಲ್ಲೂ ನೊಂದವರ ಪರ ಧ್ವನಿ ಎತ್ತುವುದನ್ನು ಕಾಣುತ್ತೇವೆ.’ ಎಂದು ಪ್ರಶಂಸಿದ್ದಾರೆ.
ಲೇಖಕ ಹುಲಿಕಟ್ಟಿ ಚನ್ನಬಸಪ್ಪ ಅವರು ಮೂಲತಃ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯವರು. ತಂದೆ- ಲಕ್ಷ್ಮಣ, ತಾಯಿ- ಲಕ್ಷ್ಮಮ್ಮ. ಮೊಳಕಾಲ್ಮೂರು ತಾಲೂಕಿನ ಅಮುಕುಂದಿ ಹಾಗೂ ಭೈರಾಪುರದಲ್ಲಿಪ್ರಾಥಮಿಕ ಶಿಕ್ಷಣ, ಹೂವಿನಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಪಿ.ಯು.ಸಿ, ಪದವಿ, ಶಿಕ್ಷಕರ ತರಬೇತಿಯನ್ನು ಹರಪನಹಳ್ಳಿಯಲ್ಲಿ ಪೂರೈಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಭಾರತ ವಿದ್ಯಾರ್ಥಿ ಸಂಘಟನೆ(ಎಸ್.ಎಫ್.ಐ), ರೈತಸಂಘಟನೆ, ಸಮುದಾಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. 1986ರಲ್ಲಿ ಅಣು ಸಮರದ ವಿರುದ್ಧ ಜನಜಾಗೃತಿಗಾಗಿ ರಾಜ್ಯದಾದ್ಯಂತ ನಡೆದ ಚಳವಳಿಯಲ್ಲಿ ಜನಪ್ರಿಯವಾಗಿದ್ದ ಹಾಡು ‘ತಲೆಗಳು ಉರುಳ್ಯಾವೊ’ ಇವರೇ ರಚಿಸಿದ್ದು. 1988ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು. ಗೌರವ ಶಿಕ್ಷಕರ ಸಂಘಟನೆ, ...
READ MORE