ಬೆಳಕಿನೆಡೆಗೆ

Author : ಕಾವ್ಯಶ್ರೀ ಮಹಾಗಾಂವಕರ

Pages 120

₹ 60.00




Year of Publication: 2008
Published by: ಕನ್ನಡನಾಡು ಪ್ರಕಾಶನ
Address: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರಿ ಸಂಘ ನಿ., ಜಿ - 2, ವಿ.ವಿ.ಹಾಸ್ಟೆಲ್ ಕಾಂಪ್ಲೆಕ್ಸ್, ಸೇಡಂ ರಸ್ತೆ, ಕಲಬುರಗಿ - 585106
Phone: 9448570985

Synopsys

ಹೊಸತನದ ವಸ್ತುಗಳೊಂದಿಗೆ ಸೆಳೆಯುವ ಶಕ್ತಿ ಇಲ್ಲಿನ ಕತೆಗಳಿಗೆ ಇದೆ. ಪ್ರೀತಿ, ವಿಶ್ವಾಸ, ನಿಸ್ವಾರ್ಥ, ಮತಾಂಧತೆ, ಮೂಢನಂಬಿಕೆ, ಆತಂಕವಾದ, ಅಸಮಾನತೆ, ಸುನಾಮಿ ಮುಂತಾದ ವಿಷಯಗಳ ಸುತ್ತ ಗಿರಕಿ ಹೊಡೆಯುತ್ತ ಆಪ್ತತೆಯನ್ನು ಕಟ್ಟಿಕೊಡುತ್ತ ಸಂದೇಶಗಳನ್ನೂ ರವಾನಿಸುತ್ತಾರೆ ಕತೆಗಾರ್ತಿ. ‘ಕತ್ತಲೆಯಿಂದ ಬೆಳಕಿನೆಡೆಗೆ’ ಕತೆಯಲ್ಲಿ ಅಮೆರಿಕದ ಎರಡು ವಿಮಾನಗಳನ್ನು ಅಪಹರಿಸಿದ ಭಯೋತ್ಪಾದಕರ ದಾಳಿಯ ಸಂದರ್ಭವನ್ನೇ ವಸ್ತುವಾಗಿರಿಸಿಕೊಳ್ಳಲಾಗಿದೆ. 

‘ಸ್ವಪ್ನ’ ತ್ರಿಕೋನ ಪ್ರೇಮ ಕತೆಯಾದರೂ ನಿರೂಪಣೆಯ ಶೈಲಿಯಿಂದಾಗಿ ನೆನಪುಳಿಯುವಂಥದ್ದು. ಮನುಷ್ಯ ಸಾಂಪ್ರದಾಯಿಕ ನಂಬಿಕೆಗಳನ್ನು ಬಿಡಲಾಗದೆ ಒದ್ದಾಡುವ ಚಿತ್ರವನ್ನು ಕಟ್ಟಿ ಕೊಡುತ್ತದೆ ‘ವಿಪರ್ಯಾಸ’ ಕತೆ. ಸಮಾಜದಲ್ಲಿ ಮಾರಿಯಾಗಿ ಬಂದ ಖಾಯಿಲೆ ಏಡ್ಸ್. ಈ ರೋಗದಿಂದ ಎಚ್ಚರಿಕೆ, ಜಾಗ್ರತೆ ಮೂಡಿಸುವ ಕತೆ ‘ಕಪಾಳಮೋಕ್ಷ’. ‘ದೂರದ ಬೆಟ್ಟ’ ಸಾಮಾಜಿಕ ಕಳಕಳಿಯನ್ನು ಹೊತ್ತಿದೆ.  

ಮನುಷ್ಯನಿಗಿರುವ ಆಸೆ ಆಮಿಷಗಳು, ಹುಟ್ಟು ಸಾವು ಕುರಿತು ಚರ್ಚಿಸುತ್ತ, ನಿಸ್ವಾರ್ಥ ಭಾವಕ್ಕಿರುವ ಅನಂತತೆಯನ್ನು ಎತ್ತಿ ತೋರಿಸುವ ಕತೆ ‘ಕೆರೆಯ ನೀರನು ಕೆರೆಗೆ ಚೆಲ್ಲಿ’. ಸುನಾಮಿಯಂತಹ ಪ್ರಳಯ ಬಂದರೆ, ಜಾತಿ, ಮತ, ಪಂಥದ ತರತಮವಿಲ್ಲದೆ ನಾಶವಾಗುವ ಮನುಷ್ಯನ ಚಿತ್ರವನ್ನು ವ್ಯಂಗ್ಯ, ವಿಷಾದದಿಂದ ಕತೆಗಾರ್ತಿ ಕಟ್ಟಿಕೊಡುತ್ತಾರೆ. 

About the Author

ಕಾವ್ಯಶ್ರೀ ಮಹಾಗಾಂವಕರ
(11 April 1969)

ಲೇಖಕಿ, ಕಾವ್ಯಶ್ರೀ ಮಹಾಗಾಂವಕರ‌ ಮೂಲತಃ ಬೀದರನವರು. ‘ಸಿಕಾ’ ಎಂಬುದು ಇವರ ಕಾವ್ಯನಾಮ. ತಂದೆ  ಬಿ.ಜಿ.ಸಿದ್ದಬಟ್ಟೆ, ತಾಯಿ ಯಶೋದಮ್ಮ ಸಿದ್ದಬಟ್ಟೆ. ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ.  ಮೈಸೂರಿನ ನಿರ್ಮಲ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ನಾರ್ಮ ಫೆಂಡ್ರಿಕ್ ಶಾಲೆಯಲ್ಲಿ ಮಾಧ್ಯಮಿಕ ಹಾಗೂ ಪದವಿಪೂರ್ವ ಶಿಕ್ಷಣ, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರೆ. . ಕೃತಿಗಳು: 'ಪ್ರೇಮ ಕಾವ್ಯ' (2006) ಕಾದಂಬರಿ, 'ಬೆಳಕಿನೆಡೆಗೆ' (2008) ಕಥಾ ಸಂಕಲನ , ಪ್ರಳಯದಲ್ಲೊಂದು ಪ್ರಣತಿ' (2013) ಕಥಾ ಸಂಕಲನ, 'ಜೀವಜಗತ್ತಿಗೆ ಜೇನಹನಿ' (2015) ವಿಮರ್ಶಾ ಬರಹ , ಪಿಸುಮಾತುಗಳ ...

READ MORE

Related Books