ಸನ್ನಿಧಿಯಲ್ಲಿ ಸೀತಾಪುರ

Author : ನಾ. ಮೊಗಸಾಲೆ

Pages 236

₹ 160.00




Year of Publication: 2014
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಡಾ. ಮೊಗಸಾಲೆ  ಅವರ ’ಸೀತಾಪುರದೊಳಗೆ’ ಕೃತಿಯು ರಾಜಕೀಯವನ್ನು ಮೀರಿ ಮನುಷ್ಯ ಸಂಬಂಧಗಳು ಒಂದು ಸಂಘರ್ಷದ ಘಟ್ಟದಲ್ಲಿ ಹೇಗೆ ವರ್ತಿಸುತ್ತವೆ, ಎರಡು ಭಿನ್ನ ಧ್ರುವಗಳು ಮುಖಮುಖಿಯಾದಾಗ ಹೇಗೆ ಶೋಧನೆಗೆ ಒಳಗಾಗುತ್ತವೆ ಎಂಬುದನ್ನು ಘಟನೆಗಳು ಮತ್ತು ಪಾತ್ರಗಳ ಮೂಲಕ ಮೊಗಸಾಲೆಯವರು ಚಿತ್ರಿಸಿದ್ದಾರೆ.

ಪದವನರ್ಪಿಸಬಹುದಲ್ಲದವೆ, ಗುಹೇಶ್ವರನೆಂಬ ಅಪ್ರಮಾಣ, ಇನ್ನು ಮುಂದೆ ಶಬ್ದ ಇಲ್ಲ, ಗುಹೇಶ್ವರನೆಂಬ ಬಯಲು, ಭಾಷೆ ಎಂಬುದು ಪ್ರಾಣಘಾತುಕ, ಅಪರಿಮಿತ ಕತ್ತಲೆಯೊಳಗೆ ವಿಪರೀತ ಬೆಳಕನಿಕ್ಕಿದೊಡೆ, ಬೆಟ್ಟದ ನೆಲ್ಲಿ ಮತ್ತು ಕಡಲಿನ ಉಪ್ಪು, ಎಂಬಂತಹ ಕಥಾನಕಗಳ ಶಿರ್ಷೀಕೆಗಳು ಅಲ್ಲಮನ ವಚನಗಳ ದರ್ಶನವನ್ನು ಮಾಡಿಸುವಂತದ್ದು.

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Related Books