ತೇಜಸ್ವಿಯವರ ’ಪರಿಸರದ ಕಥೆ’ (1991) ಹೊಸ ರೀತಿಯ ಬರವಣಿಗೆ. ಪರಿಸರದ ಬಗೆಗೆ ಕತೆ ಹೇಳುವ ರೀತಿಯಲ್ಲಿ ಹೇಳಲಾಗಿದೆ. ಮಾನೀಟರ್, ಕಿವಿಯೊಡನೆ ಒಂದು ದಿನ, ಮಾಸ್ತಿ ಮತ್ತು ಭೈರ, ಸುಸ್ಮಿತ ಮತ್ತು ಹಕ್ಕಿಮರಿ, ಎಂಗ್ಟನ ಪುಂಗಿ, ಕುಕ್ಕುಟ ಪಿಶಾಚಿ, ಮೂಲಿಕೆ ಬಳ್ಳಿಯ ಸುತ್ತ ಹೀಗೆ ಮುಂತಾದ ಪರಿಸರವನ್ನು ಕುರಿತ ಹದಿನಾಲ್ಕು ಬರಹಗಳಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ’ಕಥಾತ್ಮಕ ಪ್ರಬಂಧ’ಗಳ ಸಾಲಿಗೆ ಸೇರಿಸಿ 1992ರ ಪ್ರಶಸ್ತಿ ನೀಡಿದೆ. ಇದುವರೆಗೆ ಹದಿಮೂರು ಮುದ್ರಣ ಕಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿ.
ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...
READ MORE