ಕಂಡ ಅನುಭವಗಳನ್ನೆಲ್ಲಾ ಕತೆ ಮಾಡಿ ಹೇಳುವ ಕಸಬುಗಾರಿಕೆಯಿಂದ ಗಮನ ಸೆಳೆಯುತ್ತಾರೆ ಕೆ.ಭುವನೇಶ ಮೋಕಾ. ಒಟ್ಟು 12 ಕತೆಗಳ ಮೂಲಕ ಹಳ್ಳಿಯ ಬದುಕನ್ನು ಹೇಳಲು ತೊಡಗುತ್ತಾರೆ. ಸಾಮಾನ್ಯ ಎನಿಸುವಂತಹ ಸಂಗತಿಗಳನ್ನೂ ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡುವ ಕಲೆಗಾರಿಕೆ ಅವರಿಗೆ ಲಭಿಸಿರುವುದು ಅವರ ಕತೆಗಳಿಂದ ತಿಳಿದುಬರುತ್ತದೆ.