ಲೇಖಕ ಕೊಳ್ಚಪ್ಪೆ ಗೋವಿಂದ ಭಟ್ ಅವರ ಕತಾ ಸಂಕಲನ ‘ಬಿದಿರಿನ ಹೂ’.. ಕೃತಿಗೆ ಮುನ್ನುಡಿ ಬರೆದ ವ್ಯಾಸರಾವ್ ನಿಂಜೂರ್ 'ಬಿದಿರಿನ ಹೂ ಕೈಗೆತ್ತಿಕೊಂಡು ಓದಿ ಮುಗಿಸಿದಾಗ ಅಲ್ಲಿನ ಕಥೆಗಳ ಥೇಟ್ ನೈಜ ವಾತಾವರಣ, ಪರಿಸರದ ಬಗೆಗಿನ ಕಾಳಜಿ, ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ಸೂಕ್ಷ್ಮತೆ ಹಾಗೂ ತಾನು ಹುಟ್ಟಿ ಬೆಳೆದ ಸಮಾಜದ ಬಗ್ಗೆ ಲೇಖಕನಿಗಿರುವ ನಿರ್ವ್ಯಾಜ ಪ್ರೇಮ ನನಗೆ ಥಟ್ಟನೆ ಗೋಚರಿಸಿತು. ಸಂಕಲನದಲ್ಲಿ ಹನ್ನೊಂದು ಕಥೆಗಳಿದ್ದು ಎಲ್ಲ ಕಥೆಗಳ ನೆಲೆಯೂ ಕಾಸರಗೋಡು- ದಕ್ಷಿಣಕನ್ನಡದ ಕಲಬಾಗದ ಊರು, ಕೇರಿಗಳಾಗಿವೆ, ಈ ಊರುಗಳ, ಅಲ್ಲಿನ ಗುಡ್ಯ ಬಯಲು, ತೋಡು, ಕಣಿವೆ,, ನದಿ ಇವುಗಳೆಲ್ಲವುಗಳೂ ಕರ್ನಾಟಕದ ಇತರ ಭಾಗಗಳಿಗೆ ಅಪರಿಚಿತವೆನಿಸುವ ಹೆಸರುಗಳೂ ಓದುಗನಿಗೆ ಕೌತುಕದ ಜೊತೆಗೆ, ಹಿತವಾದ ಮುದ ನೀಡುತ್ತವೆ.’ ಎಂದು ಪ್ರಶಂಸಿದ್ದಾರೆ
ಡಾ ಕೊಳ್ಚಪ್ಪೆ ಗೋವಿಂದ ಭಟ್ ಇವರು ಮೂಲತಃ ಗಡಿನಾಡು ಕಾಸರಗೋಡು ತಾಲೂಕಿನ ಕೊಳ್ಚಪ್ಪೆ ಊರಿನವರು. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವೀಧರರು. ಸದ್ಯ ಉದ್ಯೋಗ ನಿಮಿತ್ತ ಮುಂಬೈಯಲ್ಲಿ ನೆಲೆಸಿದ್ದಾರೆ. ಬ್ಯಾಂಕಿನಿಂದ ನಿವೃತ್ತರು. ಆದರೆ, ಬ್ಯಾಂಕ್ ವೃತ್ತಿಪರರಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಕಥೆ, ಕವಿತೆ, ಲೇಖನಗಳು ಪ್ರಕಟವಾಗಿವೆ. ಕರಾಡ ಮಾಸ ಪತ್ರಿಕೆಯಲ್ಲಿ ಎರಡು ವರ್ಷಗಳಿಂದ ಹಣಕಾಸು ಮತ್ತು ಅರ್ಥಶಾಸ್ತ್ರದ ಕುರಿತ ಅಂಕಣಕಾರರು. 2016ರ “ಜೇಮ ಕವಿ ಕೆ.ಎಸ್.ನ ಪುರಸ್ಕಾರ' ಪಡೆದಿದ್ದಾರೆ. ಕೃತಿಗಳು: ಬಿದಿರಿನ ಹೂ (ಕಥಾ ಸಂಕಲನ), ನೆಲಸಂಪಿಗೆ(ಕಥಾ ಸಂಕಲನ) ಮತ್ತು ಜೋಕಾಲಿ (ಕಥಾ ಸಂಕಲನ) ...
READ MORE