ಹಿರಿಯ ಪತ್ರಕರ್ತರು ಮತ್ತು ಕತೆಗಾರರು ಆಗಿರುವ ಎಫ್.ಎಂ. ನಂದಗಾವ ಅವರ `ಘಟ ಉರುಳಿತು’ ಇದು ಇವರ ಎಂಟನೇ ಕಥಾ ಸಂಕಲನ. ವಿವಿಧ ವಾರ, ಮಾಸ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕತೆಗಳನ್ನು ಸಂಚಲನ ಪ್ರಕಾಶನ ಓದುಗರ ಮುಂದಿಟ್ಟಿದೆ. ಪತ್ರಕರ್ತನಾಗಿ ಅಪಾರ ಜೀವನಾನುಭವ ಇರುವ ನಂದಗಾವ ಅವರು ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳನ್ನು ಕತೆಯನ್ನಾಗಿಸಿದ್ದಾರೆ. ಸಾಮಾನ್ಯ ಘಟನೆಗಳನ್ನು ಕತೆಯಾಗಿ ನಿರೂಪಿಸುವಾಗ ಅವುಗಳಿಗೆ ಸಾಕ್ಷಿ ಚಿತ್ರದ ಸ್ವರೂಪ ಬಂದುಬಿಡುತ್ತದೆ. ಕತೆಗಳಿಗಿರುವ ಕುತೂಹಲದಿಂದ ಓದಿಸಿಕೊಂಡು ಹೋಗುವ ಗುಣ, ಆಕಸ್ಮಿಕ ತಿರುವು ಮತ್ತು ಅನಿರೀಕ್ಷಿತ ಮುಕ್ತಾಯ ಇರುವುದಿಲ್ಲ. ಯಥಾವತ್ತಾಗಿ ಒಂದಾದ ಮೇಲೊಂದು ಘಟನೆಗಳನ್ನು ವಾಸ್ತವಕ್ಕೆ ಕುಂದುಂಟಾಗದೆ ಜೋಡಿಸಲಾಗಿರುತ್ತದೆ. ಇಂತಹ ಸಾಕ್ಷ್ಯ ಚಿತ್ರದ ಮಿತಿಯನ್ನು ನಂದಗಾವ ಅವರು ತಮ್ಮ ಕತೆಗಳಲ್ಲಿ ಮೀರುತ್ತಾರೆ. ಘಟನೆಗಳನ್ನು ಕತೆಯಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬರಹಗಾರ, ಅನುವಾದಕ ಎಫ್.ಎಂ.ನಂದಗಾವ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂಗ್ಲಿಷ್ ಇಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಕೃತಿಗಳ ಅನುವಾದ ಮಾಡುವ ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ ಖ್ಯಾತ ಕ್ರಿಸ್ಮನ್ ಕಥೆಗಳು, ಮೂರು ಸತ್ಯಗಳು, ಇಬ್ಬರು ವೃದ್ಧರ ತೀರ್ಥಯಾತ್ರೆ, ಮೂರು ಕ್ರಿಸ್ಮಸ್ ದೈವಗಳು, ಬದುಕಲು ಏನು ಬೇಕುThe Little Flower of India ಹಾಗೂ Lead Kindly Light ಮುಂತಾದವು ...
READ MORE