‘ನಿಮ್ಮ ಮನೆಯಲ್ಲೂ ಇರಬಹುದು ಚಮ್ಮಚಿಕ್ಕಯ್ಯ’ ಕವಿ, ಲೇಖಕ ಕೆ.ಪಿ. ಮೃತ್ಯುಂಜಯ ಅವರ ಕತಾ ಸಂಕಲನ. ವ್ಯಕ್ತಿತ್ವಗಳ ಸಂಕೀರ್ಣತೆಗಳ ಮೇಲೆ ಬೆಳಕು ಚೆಲ್ಲುವ ಕತೆಗಳು ಸಂಕಲನಗೊಂಡಿವೆ. ಕವಿ ಮೃತ್ಯುಂಜಯ ಅವರ ಕತೆ ಕಾವ್ಯಾತ್ಮಕವಾಗಿಯೂ ಗಮನ ಸೆಳೆಯುತ್ತದೆ. ಪ್ರತಿ ಕತೆಯು ಸಂಬಂಧಗಳ ಸೂಕ್ಷ್ಮತೆಯನ್ನು ವಿವರಿಸುತ್ತವೆ. ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಕತೆಗಾರ ತನ್ನ ಅನುಭವವನ್ನೇ ಕತೆಯಾಗಿಸಿರುವುದು ಈ ಕೃತಿಯ ಜೀವಂತಿಕೆ.
ಕೆ.ಪಿ. ಮೃತ್ಯುಂಜಯ ಅವರು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಡಿ.ಕಲ್ಕೆರೆಯವರು. ತಂದೆ - ಪುಟ್ಟಬಸವಾಚಾರ್ ಕೆ. ತಾಯಿ- ಗಂಗಮ್ಮ. ಕನ್ನಡ ಉಪನ್ಯಾಸಕರಾಗಿದ್ದಾರೆ. ಒಂದು ಅನುರಾಗಕ್ಕಾಗಿ ಎಷ್ಟೆಲ್ಲಾ, ಮರ್ತ್ಯ ಮೀರದ ಮಾತು, ಎಲೆ ಎಸೆದ ಮರ, ಅವರವರ ಸಾವು, ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು, ನನ್ನ ಶಬ್ದ ನಿನ್ನಲಿ ಒಂದು ಅವರ ಪ್ರಕಟಿತ ಕವನಸಂಕಲನಗಳು. ಇವರ ಮೊದಲ ಕವನಸಂಕಲನಕ್ಕೆ 1994ರಲ್ಲಿ ಕಾಂತಾವರ ಕನ್ನಡ ಸಂಘದ ಮುದ್ದಣ್ಣ ಕಾವ್ಯ ಪುರಸ್ಕಾರ, ಎರಡನೇ ಕವನಸಂಕಲನಕ್ಕೆ ಡಾ. ದಿನಕರ ದೇಸಾಯಿ ಕಾವ್ಯ ಪುರಸ್ಕಾರ, ಮೂರನೇ ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ನಾಲ್ಕನೇ ...
READ MORE