ಕೆ. ಎನ್. ಗಣೇಶಯ್ಯ ಅವರ ಮೂರನೆಯ ಕಥಾ ಸಂಕಲನ ಇದಾಗಿದ್ದು ಒಟ್ಟು ಎಂಟು ಕಥೆಗಳಿವೆ. ಲೇಖಕರ ಸರಳ ನಿರೂಪಣೆ, ಮೊನಚಾದ ಬರವಣಿಗೆ ಪರಿಣಾಮಕಾರಿ ಕತಾ ಹಂದರ ಓದುಗರ ಗಮನವನ್ನು ಚರಿಯತ್ತ ಕೊಂಡೊಯ್ಯುತ್ತವೆ. ‘ಹರಿದಳಾಗೋದಾವರಿ ಅಂಡಮಾನಿಗೆ’, ‘ನೇಹಲ’, ‘ದೇಹಾತ್ಮ’, ‘ಜ್ಜಿನ ಕಿತ್ತು ಶಿವನಂ ನಿಲಿಪೆವು’ ಮುಂತಾದ ಇನ್ನು ನಾಲ್ಕು ಕತೆಗಳಿವೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE