ಜೀವನದ ಸೊಗಸು ಎಂಬ ಕಥೆ ಪುಸ್ತಕವು ಕುಡ್ಪಿ ವಾಸುದೇವ ಶೆಣೈ ಅವರ ಸಂಗ್ರಹವಾಗಿದೆ. ಈ ಪುಸ್ತಕದಲ್ಲಿ ಮದುವೆಯ ಏಜಂಟ, ಮೈ ಝಮ್ಮಾಗುವ ಸುಳ್ಳು, ನಿಮ್ಮ ಕುರಿತು ಅಭಿಪ್ರಾಯ, ಗೆಳೆತನದ ಅಳತೆ , ಕಾಣದ ಕೈ, ಅನೇಕ ವಿಷಯಗಳಿಗೆ ಸಬಂಧ ಪಟ್ಟ ಕಥೆಗಳನ್ನು ಈ ಪುಸ್ತಕದಲ್ಲಿ ಹೊರತರಲಾಗಿದೆ
ದಕ್ಷಿಣ ಕನ್ನಡದ ಹಳೆಯ ತಲೆಮಾರಿನ ಬರಹಗಾರರಲ್ಲಿ ದಿ|ಕುಡ್ಪಿ ವಾಸುದೇವ ಶೆಣೈ ಅವರ ಕೊಡುಗೆ ಅನನ್ಯ .1907ನೇ ಇಸವಿಯಲ್ಲಿ ಮಂಗಳೂರಿನಲ್ಲಿ ಕುಡ್ಪಿ ನರಸಿಂಹ ಶೆಣೈ ಹಾಗೂ ಕಲ್ಯಾಣಿ ಬಾಯಿಯವರ ಮಗನಾಗಿ ಜನಿಸಿದರು. ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪಡೆದ ಅವರು, ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಉನ್ನತ ಶಿಕ್ಷಣದಿಂದ ವಂಚಿತರಾಗಬೇಕಾಯಿತು. ನಂತರ ಉಡುಪಿಯ ಪ್ರಭಾಕರ್ ಪ್ರೆಸ್ ಹಾಗೂ ಮಂಗಳೂರಿನ ಕಂಠೀರವ ಮುದ್ರಣಾಲಯಗಳಲ್ಲಿ ಪತ್ರಿಕಾಗಾರನಾಗಿ ಕೆಲಸ ಪ್ರಾರಂಭಿಸಿ ಕಂಠೀರವ ಮತ್ತು ಸ್ವದೇಶಾಭಿಮಾನಿ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿದ್ದರು. ಕುಡ್ಪಿಯವರು ತಮ್ಮ ಸ್ವಂತ ವಾರಪತ್ರಿಕೆ ‘ಪ್ರಭಾತ’ವನ್ನು ೧೯೩೫ರಲ್ಲಿ ಪ್ರಾರಂಭಿಸಿದರು. ಕುಡ್ಪಿಯವರು ‘ಪ್ರಭಾತ ಪ್ರಿಂಟರ್ಸ್ ಲಿಮಿಟೆಡ್’ ...
READ MORE