‘ಹದಿನಾಲ್ಕು ಕಿರು ಹಾಸ್ಯ ನಾಟಕಗಳು’ ಕೃತಿಯು ಎಚ್.ಡುಂಡಿರಾಜ್ ಅವರ ನಾಟಕಸಂಕಲನವಾಗಿದೆ. ಈ ಕಿರುನಾಟಕಗಳ ವಿಶೇಷತೆ ಏನು ಗೊತ್ತಾ ? ಇದು 3ಡಿ. ಕೇವಲ ಓದಿಯೂ ಖುಷಿ ಪಡಬಹುದು, ರೇಡಿಯೋ ನಾಟಕವಾಗಿಸಿಯೂ ಖುಷಿ ಪಡಬಹುದು ಮತ್ತು ರಂಗದ ಮೇಲೆ ಅಡಿಯೂ ಖುಷಿ ಪಡಬಹುದು. ಕೆಲವೇ ಕೆಲವು ಪಾತ್ರಗಳಿರುವುದರಿಂದ ಆಡುವವರಿಗೂ ಸುಲಭ. ಅದರಲ್ಲೂ ಶಾಲೆ, ಕಾಲೇಜುಗಳಲ್ಲಿ ಆಡುವುದಕ್ಕೆ ರಾಜ್ಯೋತ್ಸವಾದಿ ಸಮಾರಂಭಗಳಲ್ಲಿ ಪ್ರದರ್ಶಿಸುವುದಕ್ಕೆ ಹೇಳಿ ಮಾಡಿಸಿದ ಹಾಗಿದೆ, ಅಲ್ಲಲ್ಲ, ಹೇಳಿ ಬರೆಸಿದ ಹಾಗಿದೆ. ಡುಂಡಿರಾಜರ ಶೈಲಿಯ ಪರಿಚಯವಿದ್ದವರು ನಾಟಕಗಳಲ್ಲಿ ಅವರ ಪಂಚ್ಚಳನ್ನು ಗುರುತಿಸಬಹುದಾದರೂ, ಇದರಲ್ಲಿ ಒಂದು ಸರ್‌ಪ್ರೈಸ್ ಎಲಿಮೆಂಟ್ ಕೂಡಾ ಇದೆ, ಏನು ಗೊತ್ತಾ? ಇವರು ದಕ ಆದರೂ ಕೆಲವು ಪ್ರಹಸನಗಳಲ್ಲಿ ಉಕ ಆಗಿದ್ದಾರೆ. ಅಂದರೆ ಉತ್ತರ ಕರ್ನಾಟಕದ ಭಾಷೆ ಬಳಸಿರೋದರಿಂದ ಈ ನಾಟಕಗಳು ಅಲ್ಲಿಯೂ ಜನಪ್ರಿಯವಾಗುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ಇಡೀ ಕರ್ನಾಟಕಕ್ಕೆ ಸಲ್ಲುವ ನಾಟಕಗಳಿವು. ಅಂತಾರಲ್ಲ? ಅದರಲ್ಲಿ ಡುಂಡಿರಾಜ್ - ಸಿದ್ಧಹಸ್ತರು. “ಡಿವೈಡ್ ಅಂಡ್ ಅಂದರೆ ಒಡೆದಾಳುವ ನೀತಿ. ಇವರದ್ದು "ಪದಗಳನ್ನು " ಒಡೆದು ಆಡುವ ರೀತಿ, ಅಲ್ಲದೆ ಹೊಸ ಹೊಸ ಪದಗಳನ್ನೂ ಕನ್ನಡ ಭಾಷೆಗೆ ಕಾಣಿಕೆಯಿತ್ತಿದ್ದಾರೆ ಎನ್ನುತ್ತಾರೆ ವೈ.ವಿ. ಗುಂಡೂರಾವ್.
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE