ಲೇಖಕ ಗಂಗಾಧೃ ಬೆಳ್ಳಾರೆ ಅವರ ಕೃತಿ-ಇವರು ನೀವಲ್ಲ. ವರ್ತನೆಗಳನ್ನು ವಿಶ್ಲೇಷಿಸಿದ ಸಾಹಿತ್ಯ ಕೃತಿಯೊಂದು ಹೇಗೆ ಕತೆಗಳಾಗುತ್ತವೆ ಎಂಬುದಕ್ಕೆ ಈ ಕೃತಿ ಕನ್ನಡಿ ಹಿಡಿಯುತ್ತದೆ. ಈ ಕತೆಗಳು ದಿನನಿತ್ಯದ ಕತೆಗಳಿಗಿಂತ ಭಿನ್ನ. ಕಥಾವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಎಲ್ಲವೂ ಓದುಗರ ಗಮನ ಸೆಳೆಯುತ್ತವೆ. ನಮ್ಮ ವರ್ತನೆಗಳಿಗೆ ನಮ್ಮ ಮನಸ್ಸೇ ಕಾರಣ ಎಂಬುದನ್ನು ಈ ಸಾಹಿತ್ಯ ಕೃತಿ ನಿರೂಪಿಸುತ್ತದೆ.
ಆಪ್ತಸಲಹೆಗಾರ, ಮನೋವಿಜ್ಞಾನಿ ಹಾಗೂ ಸಾಹಿತಿಯಾಗಿರುವ ಗಂಗಾಧರ ಬೆಳ್ಳಾರೆ ಹುಟ್ಟಿದ್ದು 1965ರಲ್ಲಿ. ಮನೋವಿಜ್ಞಾನ ವ್ಯಾಸಂಗದೊಂದಿಗೆ ಪದವಿ ಹಾಗೂ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವೀಧರರು. ಯಕ್ಷಗಾನ ಕಲಾವಿದ, ಮೃದಂಗವಾದಕ, ಮೇಕಪ್ ಕಲಾವಿದ, ನೃತ್ಯರೂಪಕ ಹಾಗೂ ನಾಟಕಗಳ ಕಲಾವಿದರಾಗಿಯೂ ಪ್ರಸಿದ್ಧರು. ಸೈಕೋಥೆರಪಿ, ಗ್ರೂಪ್ ಕೌನ್ಸೆಲಿಂಗ್, ಕ್ಲಿನಿಕಲ್ ಹಿಪ್ನೋಸಿಸ್ ಚಿಕಿತ್ಸಕರು. ‘ಚಿಲಿಪಿಲಿ, ಗಾಜಿನ ತೇರು, ತಬ್ಬಲಿಯು ನೀನಲ್ಲ ಮಗಳೆ, ಕಲಿಕೆ ಹಾದಿಯ ಮಗು, ಕನಸು ಹೆಕ್ಕುವ ಮನಸು, ಇವರು ನೀವಲ್ಲ, ತಪ್ಪು ತಿದ್ದುವ ತಪ್ಪು, ಮೌನಗರ್ಭ’ ಅವರ ಕೃತಿಗಳು. ‘ನೆನಪಿಗೊಂದು ಕೌನ್ಸೆಲಿಂಗ್’ ಕೃತಿಗೆ ‘ಅಕಲಂಕ ಪುಸ್ತಕ ಪುರಸ್ಕಾರ ಪ್ರಶಸ್ತಿ’ ದೊರೆತಿದೆ. ...
READ MORE