‘ಗಿಲಿಗಿಲಿಯಾ’ ಮೋದೂರು ತೇಜ ಅವರ ಜನಪದ ಕಥಾ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಸಾಲುಗಳು ಹೀಗಿವೆ: ಕತೆ ಕೇಳೋದು ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ? ಎಲ್ಲರಿಗೂ ಇಷ್ಟಾನೆ. ಕತೆ ಹೇಳೋರು ಬೇಕಲ್ಲ? ವಿಪರ್ಯಾಸ ಏನಂದ್ರೆ: ನಡುಮನೆಗೆ ಟಿ.ವಿ. ಅನ್ನುವ ಮಾಯಾಪೆಟ್ಟಿಗೆ ಬಂದ ಮೇಲೆ, ಮನೆ ಅಂಗಳದಲ್ಲಿ ಚಾಪೆ ಹಾಸಿಕೊಂಡು ಮೊಮ್ಮಕ್ಕಳಿಗೆ ಕತೆ ಹೇಳುತ್ತಿದ್ದ ಅಜ್ಜ-ಅಜ್ಜಿಯರೇ ನಾಪತ್ತೆಯಾದರು. ಕೈಗೆ ಸ್ಕ್ರೀನ್ ಟಚ್ ಮೊಬೈಲ್ ಬಂದ ಮೇಲಂತು ಕತೆ ಹೇಳುವುದಕ್ಕಾಗಲಿ, ಕೇಳುವುದಕ್ಕಾಗಲಿ ಸಮಯಾನೆ ಸಾಲದಾಗಿದೆ. ಸೋಶಿಯಲ್ ಮೀಡಿಯಾಗಳ ಅಬ್ಬರದಲ್ಲಿ ನಮ್ಮ ಸೃಜನಶೀಲತೆಯನ್ನ ನಾವೇ ಕಳಕೊಳ್ತಾ ಇದೀವಿ. ಅದರಲ್ಲೂ ಕೊರೋನಾ ಕಾಲಘಟ್ಟದಲ್ಲಿ ಯಾರ ಮೇಲೆ ಯಾವ ಪರಿಣಾಮ ಬೀರಿತೊ ಗೊತ್ತಿಲ್ಲ. ಆದರೆ ವಿದ್ಯಾರ್ಥಿಗಳ ಕಲಿಕೆ ಮೇಲೆ ತುಂಬಾ ಪರಿಣಾಮ ಬೀರಿತು. ಆ ವಿದ್ಯಾರ್ಥಿ ಸಮೂಹವನ್ನ ಈಗಲೂ ಸಹ ಮೊಬೈಲ್ ನೋಡುವ ಚಟದಿಂದ ಹೊರತರಲಾಗಿಲ್ಲ. ಅವರ ಏಕಾಗ್ರತೆ ಕುಂಠಿತಗೊಂಡಿದೆ. ಕಲಿಕೆಯಲ್ಲಿ ನಿರಾಸಕ್ತಿ ಮೂಡಿದೆ. ಒಬ್ಬ ಶಿಕ್ಷಕನಾಗಿ ಇದೆಲ್ಲವನ್ನು ಹತ್ತಿರದಿಂದ ನೋಡಿದ ನಾನು, ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಒಂದು ಪಾಠ ಮತ್ತು ಪದ್ಯ ಮುಗಿದ ಮೇಲೆ ನಿಮಗೊಂದು ಕತೆ ಹೇಳ್ತಿನಿ ಎಂದಾಗ ಮಕ್ಕಳ ಮುಖ ಚಿತ್ರವೇ ಬದಲಾಗಿ ಖುಷಿಯಿಂದ ಅರಳುತ್ತಿತ್ತು. ಪಾಠ ಪದ್ಯ ಮುಗಿದ ಮೇಲೆ ನಾನು ಮರೆತರು ಮಕ್ಕಳೆ ನೆನಪಿಸುತ್ತಾರೆ. ಕತೆ ಹೇಳಬೇಕೆಂದು ಒತ್ತಾಯಿಸುತ್ತಾರೆ. ನಾನು ಕತೆ ಹೇಳಲು ಶುರು ಮಾಡಿದಾಗ, ಮಕ್ಕಳ ಮುಖದಲ್ಲೊಂದು ನಗು ಮೂಡಿರುತ್ತದೆ. ಕಣ್ಣಲ್ಲೊಂದು ಕಾಂತಿ ತುಂಬಿರುತ್ತದೆ. ಕತೆಯನ್ನ ತುಂಬಾ ಶ್ರದ್ಧೆಯಿಂದ, ಆಸಕ್ತಿಯಿಂದ ಕೇಳುತ್ತಾರೆ. ಆ ಮೂಲಕ ಅವರ ಏಕಾಗ್ರತೆಯನ್ನ ಹೆಚ್ಚಿಸುವ ಒಂದು ಸಣ್ಣ ಪ್ರಯತ್ನ ಮಾಡುತಿದ್ದೇನೆ. ಅಗ ನನ್ನ ನೆರವಿಗೆ ಬರೋದು ನಾನು ಬಾಲ್ಯದಲ್ಲಿ ಕಲಿತ ಜನಪದ ಕತೆಗಳು ಅವುಗಳನ್ನು ಈ ಪುಸ್ತಕಗಲ್ಲಿ ನೋಡಬಹುದು.
ಲೇಖಕ ಮೋದೂರು ತೇಜ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಕರ್ನಾಟಕ -ಆಂಧ್ರ ಗಡಿಭಾಗದ ಮೋದೂರು ಗ್ರಾಮದವರು. ಪ್ರಾಥಮಿಕ -ಪ್ರೌಢ ಶಿಕ್ಷಣವನ್ನು ಮೋದೂರು, ಜಾಜೂರು, ಚಳ್ಳಕೆರೆ, ಹಾಗೂ ಚಿಕ್ಕಮಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಮೈಸೂರಿನ ಮುಕ್ತ ವಿ.ವಿ.ಯಿಂದ ಎಂ.ಎ ಪದವಿ ಪಡೆದರು. ಕೃತಿಗಳು: ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಂದಿಗೆ ಪ್ರಕಟಿತ ಕವನ ಸಂಕಲನ-‘ಮರದೊಳಗಣ ಕಿಚ್ಚು (2007). ಬುದ್ಧನ ಮೇಲೂ ಯುದ್ಧ’(2010), ಭೂಮಿ ತೂಕದ ಪ್ರೀತಿ(2011), ಅರ್ಧಕ್ಕೆ ನಿಂತ ಚಿತ್ರ (2013), ಹುಲಿವೇಷ ಇವು ಕಥಾ ಸಂಕಲನಗಳು, ವೇದಾವತಿ ತೀರದಲ್ಲಿ (2011) ಹಾಗೂ ತುದಿ ಇರದ ಹಾದಿ-ಇವು ಕಾದಂಬರಿಗಳು, ನಾಡಿನ ವಿವಿಧ ಪತ್ರಿಕೆಗಳು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ...
READ MORE