ಗಿರಿಕಂದರ ಎಸ್ಟೇಟ್

Author : ಗಿರಿಮನೆ ಶ್ಯಾಮರಾವ್

Pages 264

₹ 180.00




Year of Publication: 2020
Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರಂ ವಿಸ್ತರಣೆ, ಸಕಲೇಶಪುರ, ಹಾಸನ ಜಿಲ್ಲೆ-573134

Synopsys

ಲೇಖಕ ಗಿರಿಮನೆ ಶಾಮರಾವ್ ಅವರ ಕೃತಿ-ಗಿರಿಕಂದರ ಎಸ್ಟೇಟ್. ಇದು ಮಲೆನಾಡಿನ ವೈವಿಧ್ಯಮಯ ರೋಚಕ ಕತೆಗಳ ಸರಣಿ ಭಾಗ-10. ಮಲೆನಾಡು, ಅರೆ ಮಲೆನಾಡು ನಂತರ ಬಯಲು ಪ್ರದೇಶ ಹೀಗೆ ಕತೆಗಳು ಸುತ್ತುವ ಮೂಲಕ ಭೌಗೋಳಿಕ ಅಂಶಗಳನ್ನು, ಹೆಚ್ಚುಗಾರಿಕೆಯ ಮಾಹಿತಿ ನೀಡುತ್ತವೆ. ಪಶ್ಚಿಮಘಟ್ಟ ಪ್ರದೇಶಗಳು ಮನುಷ್ಯರ ವಾಸಕ್ಕೆ ಯೋಗ್ಯವಲ್ಲ . ಅದು ಪ್ರಾಣಿಗಳು ವಾಸ ಮಾಡುವ ಜಾಗ . ನಾವೀಗ ಅವುಗಳನ್ನು ಅತಿಕ್ರಮಿಸಿಕೊಂಡಿದ್ದೇವೆ. ಅರೆ ಮಲೆನಾಡೇ ಮನುಷ್ಯವಾಸಕ್ಕೆಯೋಗ್ಯ. ಇಲ್ಲಿ ಬೆಳೆಯುವ ಬೆಳೆಯೂ ಹುಲುಸು , ಕಾಫಿ ಮತ್ತು `ಕಪ್ಪುಚಿನ್ನ` ಎಂದೇ ಪ್ರಸಿದ್ಧವಾದ ಕಾಳುಮೆಣಸು ಬೆಳೆಯಲು ಪ್ರಶಸ್ತವಾದ ಪ್ರದೇಶ. ತಪ್ಪಿ ಹೋದ ಹೆತ್ತವರನ್ನು ಡಿ.ಎನ್.ಎ. ತಂತ್ರಜ್ಞಾನದ ಮೂಲಕ ಹುಡುಕುವ ರೋಚಕ ಕಲ್ಪನೆಯ ಕಾದಂಬರಿಯ ಜೊತೆಗೇ ಸಾಗುವ ಇಲ್ಲಿಯ ಪ್ರಕೃತಿ ಚಿತ್ರಣವು ಕತೆಗಳನ್ನು ಓದಿಸಿಕೊಂಡು ಹೋಗುತ್ತವೆ.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books