‘ಚೋದ್ಯ’ ಅನುಪಮಾ ಪ್ರಸಾದ್ ಅವರ ಕಥಾಸಂಕಲನವಾಗಿದೆ. ಏಕಾಂತಕ್ಕಿಳಿದು ಬರೆಯಲು ತೊಡಗುವುದು.. ನಂತರ ಅದು ಬರೆಸಿಕೊಳ್ಳುತ್ತಾ ಹೋಗುವ ಪ್ರಕ್ರಿಯೆ.. ಮತ್ತೆಲ್ಲೊ ಒಂದು ಕಡೆ ಅದೇ ಕಂಡುಕೊಳ್ಳುವ ನಿಲುಗಡೆ.. ಇದೆಲ್ಲ ಸೇರಿದಾಗ ಸಿಗುವ ಮೊತ್ತವೇ ಕಥೆಯೆಂಬ ಚೋದ್ಯ ಅಂತಹ ಕೆಲವು ಈಗ ಮತ್ತೆ ನಿಮ್ಮ ಓದಿಗಾಗಿ ಕಾಯುತ್ತಿವೆ. ಕೈಗೆತ್ತಿಕೊಳ್ಳುವ ನಿಮಗೆ ಶರಣು. ಇಲ್ಲಿರುವ ಕಥೆಗಳಲ್ಲಿ ಕೆಲವು ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ ಹಾಗು ಮಯೂರ, ತುಷಾರ, ತರಂಗ ವಿಶೇಷಾಂಕ, ವಿಜಯವಾಣಿ ವಿಶೇಷಾಂಕ, ಸುಧಾ ವಿಶೇಷಾಂಕ, ನ್ಯಾಯ ಪಥ ಮುಂತಾದ ಪತ್ರಿಕೆಗಳಲ್ಲಿ, ಡಿಜಿಟಲ್ ಮಾಧ್ಯಮ ಬುಕ್ ಬ್ರಹ್ಮದಲ್ಲಿ ಪ್ರಕಟಗೊಂಡಿವೆ. ಈ ಎಲ್ಲ ಪತ್ರಿಕಾ ಸಂಪಾದಕರುಗಳಿಗೆ, ಬಿಡಿಯಾಗಿ ಪ್ರಕಟಗೊಂಡಾಗ ಓದಿ ಪ್ರತಿಕ್ರಿಯಿಸಿದ್ದ ಓದು ಸ್ನೇಹಿಗಳಿಗೆ ಪ್ರೀತಿಯ ನೆನಕೆಗಳು. ನಮ್ಮ ಮನವಿಗೆ ಸ್ಪಂದಿಸಿ ಎಲ್ಲ ಕಥೆಗಳನ್ನು ಓದಿ ತಮ್ಮ ಅಭಿಪ್ರಾಯವನ್ನು ಬರೆದು ಬೆನ್ನುಡಿಗೆ ಬಳಸಿಕೊಳ್ಳಲು ಅನುಮತಿ ನೀಡಿದ ಕಥೆಗಾರ ಕೇಶವ ಮಳಗಿಯವರಿಗೆ ಹಾಗು ಕುಂತ್ಯಮ್ಮಳ ಮಾರಾಮು ಎಂಬ ಕಥೆಗೆ ತಾವು ಬರೆದ ಟಿಪ್ಪಣಿಯನ್ನು ಬಳಸಿಕೊಳ್ಳಲು ಅನುಮತಿ ನೀಡಿದ ವಿಮರ್ಶಕಿ ಆಶಾದೇವಿಯವರಿಗೆ ಪ್ರೀತಿಯ ನನ್ನಿ.
ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ. ಅವರ ಕಥಾಸಂಕಲನಗಳು ಚೇತನ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ. ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ...
READ MORE