ನಿಗೂಢ ಸೌಧ ಕಥಾಸಂಕಲನವನ್ನು ಲೇಖಕ ನಿರಂಜನ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಆತನ ಹೆಜ್ಜೆಗಳ ಸದ್ದು ಆವಾರದಲ್ಲಿ ಪ್ರತಿಧ್ವನಿಸುತ್ತಿತ್ತು. ಅಲ್ಪತನಕ್ಕೆ ನಾಚಿಕೊಂಡು ಕಣ್ಣೀರು ಸುರಿಸಿದ ಆಕೆ ಆ ತರುಣನನ್ನು ಮರುಳುಗೊಳಿಸಿದಳು...ನಾನು ಅನೇಕ ವರ್ಷಗಳವರೆಗೆ ಕಡು ಬಡವನಾಗಿದ್ದೆ. ಇವರಿನ್ನೂ ಚಿಕ್ಕವರಾಗಿದ್ದರೇ ಚೆನ್ನಾಗಿತ್ತು. ಜೀವನ ಎಷ್ಟು ಅರ್ಥಪೂರ್ಣವಾಗಿ ಕಾಣಿಸ್ತದೆ ಗೊತ್ತೆ ? ಆತ ಇರಲೇ ಇಲ್ಲ ಎಂದಳು ಕುಮಾರಿ ಜೋ. ಕಟ್ಟಿಗೆ ಕಡಿಯುತ್ತಿದ್ದಾಕೆ ಮತ್ತೊಂದು ತುಂಡನ್ನು ಸೀಳಿದಳು ಬ್ರೆಡ್ಡಿನ ಒಂದು ತುಣುಕಿನ ಬಗೆಗೆ ಮಾತನಾಡು... ಆ ವಿಸ್ತಾರವಾದ ಆಕಾಶದಲ್ಲಿ ಸಾವಿರಾರು ಚುಕ್ಕೆಗಳು... ಅದು ಸಾಧ್ಯವಿಲ್ಲ; ನನಗೆ ಶಿಕ್ಷೆ ಯಾಕೆ ? ಫ್ರಾನ್ಸ್‌ಗೆ ಮೀಸಲಾದ ಕಥಾಸಂಗ್ರಹ ನಿಗೂಢ ಸೌಧ. ಇದು ವಿಶ್ವಕಥಾಕೋಶದ ಇಪ್ಪತ್ತೊಂದನೆಯ ಸಂಪುಟ ಎಂದು ಪುಸ್ತಕದ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE