ತಿರುಪತಿ ಭಂಗಿ ಅವರ ನಾಲ್ಕನೇ ಕತಾಸಂಕಲನ-ಕೆಂಪರೋಡ್. ಬಡತನ, ಕಾಮ, ಮೂಢನಂಬಿಕೆ, ದೆವ್ವ-ದೇವರ ಕಲ್ಪನೆಗಳ ಸುತ್ತ ಕತೆಗಳ ಓಟ ಇವುಗಳ ಇರುವು ಇಲ್ಲಿ ಕಥಾವಸ್ತು. ಕೃತಿಗೆ ಬೆನ್ನುಡಿ ಬರೆದಿರುವ ಶ್ರೀಧರ ಬನವಾಸಿ ಅವರು “ಒಂದು ಕೆಟ್ಟ ವ್ಯವಸ್ಥೆ ತಾನು ಮಾಡಬೇಕಾದ ಜವಾಬ್ದಾರಿಯನ್ನು ಮರೆತು ಕುಳಿತಾಗ ಅದರಿಂದಾಗುವ ಅನಾಹುತಗಳೇ ಅದರ ಕನ್ನಡಿಯಾಗಿರುತ್ತದೆ. ಈ ಮಾತಿಗೆ ಕೆಂಪರೋಡ್ ಕಥೆ ಒಂದು ನಿದರ್ಶನವಾಗುತ್ತದೆ” ಎಂದಿದ್ದಾರೆ.
ಕತೆಗಾರ ತಿರುಪತಿ ಭಂಗಿ ಅವರು ಬಾಗಲಕೋಟೆ ಸಮೀಪದ ದೇವನಾಳ ಎಂಬ ಹಳ್ಳಿಯಲ್ಲಿ 1984 ರಲ್ಲಿ ಜನಿಸಿದರು. ತಂದೆ ಮಲ್ಲಪ್ಪ ತಾಯಿ ಗೌರವ್ವ. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡರು. ಹೈಸ್ಕೂಲ್ ಶಿಕ್ಷಣ ಮಾಡುತ್ತಿರುವಾಗಲೇ ಅಜ್ಜ-ಅಜ್ಜಿಯರೂ ತೀರಿಕೊಂಡರು. ಸಾಹಿತ್ಯ ರಚನೆಗೆ ಇವರ ಬಡತನ, ಹಸಿವು, ಅವಮಾನಗಳೇ ಮೂಲ ದ್ರವ್ಯ. . ಬಾಗಲಕೋಟೆಯ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಹೃದಯರಾಗ, ಅವ್ವ, ಕವಳೆಗಣ್ಣಿನ ಹುಡುಗಿ, ಮನಸು ಕೊಟ್ಟವಳು, ಅಪ್ಪ’ ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಮೊದಲ ಕಾದಂಬರಿ ‘ಫೋಬಿಯಾ' 2017ರಲ್ಲಿ ಪ್ರಕಟಣೆ ಕಂಡಿತು. ಅವರ ‘ಜಾತಿ ಕುಲುಮ್ರಾಗ ಅರಳಿದ ಪ್ರೀತಿ’ ಚೊಚ್ಚಲ ಕೃತಿ ...
READ MORE