‘ಬ್ಯಾಟೆಮರ’ ಎ.ಎಸ್.ಜಿ ಅವರ ಕಥಾಸಂಕಲನವಾಗಿದೆ. ಜನ, ಬದುಕು, ಭಾಷೆಗಳ ಸಮ್ಮಿಲನವಾಗಿ ಈ ಕೃತಿಯು ಹೊರಬಂದಿದೆ. ಕೃತಿಯ ಬೆನ್ನುಡಿಯಲ್ಲಿನ ಭಾಷಾ ಸೊಗಡು ಹೀಗಿದೆ; ಈ ಕಳ್ಳಿಕಾಡು ಊರಿನಾಚಿಗೆ ಅಳ್ಳಿಮರ ದಾಟ್ಕಂಡು ಮುಂದುಕ್ಕೋದ್ರೆ ಸಿಗ್ತಿದ್ದಿದ್ ನಾಕೈದ್ ಎಕರೆ ಕಳ್ಳಿಗಿಡ್ಗುಳ್ ಬೆಳ್ಮಂಡಿದ್ ಕಾಡು. ಕಳ್ಳಿಗಿಡುದ್ ಜೊತಿಗೆ ಲೆಕ್ಕೆಗಿಡ, ರೋಜರ್ ಗಿಡ, ಅಲ್ಲೊಂದು ಇಲ್ಲೊಂದ್ ಹೊಂಗೆಮರುವೆ ಸೇರ್ಕ್ಕಂಡು ಹಬ್ಕ್ಯಂಡಿದ್ ಕಾಡದು. ಇಡೀ ಊರಲಿ ಯೆಂಗುಸ್ರುನ್ನ ಬುಟ್ರೆ ಬಾಕ್ಕರು ಬತ್ತಿದ್ದಿದ್ದು ಬಾಳ ಕಡ್ಮೆ. ಊರುಳ್ಗೆ ಸಣ್ಣುಡ್ಳು ಬಾಳ್ ತಗಳಕೆ ದುಡ್ಡಿಲ್ದಿದ್ರೆ ಯಾರೋ ಒಣಾಕಿದ್ ಬಟ್ಟೆನೋ ಇಲ್ಲಾಂದ್ರೆ ಸಿಕ್ಕಿದ್ ಬಟ್ಟೆನೋ ತಗಂಡು ಅದ್ರಲಿ ಬಾಲ್ ಮಾಡ್ಕಂಡು ಆ ಬಾಲ್ ಹರಿಬಾರ್ದುಂತವ ಅದುಕ್ಕೆ ಕಳ್ಳಿಹಾಲ ಕುಡ್ಸಕೆ ಈ ಕಾಡೊಳಿಕ್ ಬರರು. ಹೀಗೆ ಊರಿನ ಸೊಗಡನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
ಸಿನಿಕರ್ಮಿ ಎ.ಎಸ್.ಜಿ ಅವರು ಮೂಲತಃ ಹಾಸನ ಜಿಲ್ಲೆಯ ಗಂಡಸಿಯವರು. ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕೃತಿಗಳು: ಬ್ಯಾಟೆಮರ(ಕಥಾಸಂಕಲನ) ...
READ MORE