‘ಬದುಕೆಂಬ ಬಿಸಿಲ್ಗುದುರೆ’ ಕೃತಿಯು ಹಡವನಹಳ್ಳಿ ವೀರಣ್ಣಗೌಡರ ಕತಾಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ಗಣೇಶ್ ಪ್ರಸಾದ್, `ಸಾಮಾಜಿಕ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ವೀರಣ್ಣಗೌಡರು ‘ವಾಸ್ತವ ಬದುಕು’ ಕಥೆಯನ್ನು ತಮ್ಮ ಸಂಶೋಧನಾ ಭಾಗವಾಗಿಯೇ ರಚಿಸಿದ್ದಾರೆಂದೆನಿಸುತ್ತದೆ. ನೀರಿನಿಂದ ಹೊರತಂದು ಬಿಟ್ಟ ಮೀನಿನಂತಾಗಿರುವ ಆದಿವಾಸಿಗಳ ಕುಂದುಕೊರತೆಗಳಿಗೆ ಐದಾರು ದಶಕಗಳು ಕಳೆದರೂ ಇನ್ನೂ ಸಮರ್ಪಕವಾಗಿ ಸ್ಪಂದಿಸಿದ ಸರ್ಕಾರಗಳ ಎಡೆಬಿಡಂಗಿತನವನ್ನು ಎತ್ತಿ ತೋರಿಸುತ್ತದೆ ಈ ಕಥೆ. ಒಟ್ಟಾರೆ, ಇಲ್ಲಿರುವ ಎಲ್ಲಾ ಕಥೆಗಳಲ್ಲಿಯು ಒಂದಿಲ್ಲೊಂದು ಸಾಮಾಜಿಕ ಕಳಕಳಿಯ ಧ್ವನಿಯನ್ನು ಗುರುತಿಸಬಹುದಾಗಿದೆ. ಕಥೆಗಾರರು ಅಲ್ಲಲ್ಲಿ ನಿರೂಪಣೆ ಮತ್ತು ಕಥೆಯನ್ನು ಜೋಡಿಸುವ ತಂತ್ರದಲ್ಲಿ ಸೊರಗಿದಂತೆ ಕಂಡುಬಂದರೂ ಆಯ್ಕೆ ಮಾಡಿಕೊಂಡಿರುವ ವಸ್ತುವಿಷಯ ಮತ್ತು ಕಥೆಯೊಳಗಿನ ಗಟ್ಟಿತನದಿಂದ ಗೆದ್ದಿದ್ದಾರೆ. ಸಾಮಾನ್ಯ ಮತ್ತು ಸಂಕೀರ್ಣ ವಿಷಯಗಳೆರಡನ್ನು ಕತೆಯಾಗಿಸಬಲ್ಲ ಚಾತುರ್ಯ ಕತೆಗಾರರಲ್ಲಿರುವುದು ಈ ಸಂಕಲನದಿಂದ ಮನದಟ್ಟಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಹಡವನಹಳ್ಳಿ ವೀರಣ್ಣಗೌಡ ಅವರು ಮೂಲತಃ ತುಮಕೂರಿನವರು. ಅಭಿವೃದ್ದಿ ಮತ್ತು ಸಬಲೀಕರಣ ಸಂಸ್ಥೆಯಲ್ಲಿ ಸಾಮಾಜಿಕ ಸಂಶೋಧಕರಾಗಿದ್ದರು. ಕೃತಿಗಳು: ಗಾಂಧಿಯ ಗಡಿಪಾರು, ಬೆಟ್ಟದೊಳಗಿನ ಬಿಂದು, ಬದುಕೆಂಬ ಬಿಸಿಲ್ಗುದುರೆ ...
READ MORE