ಸಾಸಿವೆ ಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ ಮತ್ತು ಇತರೆ ಬೆಳಕಿನ ಕಥೆಗಳು-ಈ ಕೃತಿಯನ್ನು ಲೇಖಕ ಸಿ.ಎಚ್. ರಾಜಶೇಖರ ರಚಿಸಿದ್ದು,25 ಬಿಡಿ ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಪ್ರಕಟಿಸಲಾಗಿದೆ. ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾಗುವ ಅಮರ ಜಾತಕ ಕಥೆಗಳ ಸಂದೇಶ ಇಲ್ಲಿವೆ. ಇವು ಸಮಗ್ರ ಮತ್ತು ಸಮ್ಯಕ್ ದೃಷ್ಠಿಕೋನದಿಂದ ಕೂಡಿದ ಪರಿಪೂರ್ಣ ಕಥೆಗಳಾಗಿವೆ. ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. ಈ ಕೃತಿಯು 18 ಶೀರ್ಷಿಕೆಗಳಾದ ಅಸತ್ಯ ನಿರಂತರವಲ್ಲ ಎಂದಳಾ ಸುರಸುಂದರಿ, ಪುರ್ನಜನ್ಮದ ಬಗ್ಗೆ ಸಾರಿಸುತ್ತ ಹೀಗೆಂದ, ಪಸೇನದಿ ಪ್ರಶ್ನಿಸಿದ ಸಾವಿನ ಬಳಿಕ ಏನು, ಬುದ್ಧನೆಂದ ಪ್ರಶ್ನಿಸದಿರು ಸಾವಿನ ಬಳಿ ಏನೆಂದು, ದ್ವೇಷ ತರವಲ್ಲ ಪ್ರೀತಿ ಸುಖ, ಈಸುಕರಿಯು ಪ್ರಶ್ನಿಸಿದ ಬುದ್ಧಂಗೆ ಮೂರು ಪ್ರಶ್ನೆ, ವೇದಾಂತ ಬರೀ ಕನ್ನಡಿಯ ಗಂಟು, ಭಯಕ್ಕೆ ಅಜ್ಞಾನವೇ ಮೂಲ, ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗ, ವಿಶಾಖಳೇ ಸಕಲರೊಳ್ ನಿನ್ನ ಮೊಮ್ಮಗಳ ಕಾಣೆಂದ ಬುದ್ದ, ಧರ್ಮಕ್ಕಿಲ್ಲ ದೇವರ ಹಂಗು ನೈತಿಕತೆಯೇ ಧರ್ಮ, ಪುಟಕ್ಕಿಟ್ಟ ಚಿನ್ನವಾಗೆಂದ ಬುದ್ಧ, ಧರ್ಮವೇ ಸೌಂದರ್ಯ ದೇಹವಲ್ಲ, ಬುದ್ಧನ ನಿಲ್ಲಿಸಿದಳಾಕೆ ನ್ಯಾಯಸ್ಥಾನದಲ್ಲಿ ಪಡೆಯೆ ಗಂಡನ ಮರಳಿ, ಇಲ್ಲದ್ದ ಬಯಸಿ ಇದುದ್ದ ಕಳೆದುಕೊಳ್ಳುವುದೇ ಅಜ್ಞಾನ, ಹೌದು ಕೇಶ ಮುಕ್ತ ಭಿಕ್ಷುವಿಗೆ ಸಮ, ಸಂಕೇತವೇ ಸತ್ಯವಲ್ಲ ಸತ್ಯ ಕುರುಡಂಗೂ ಬೆಳಕು ನೀಡುವುದೆಂದ ಬುದ್ಧ, ಬಾದಾಳೇ ಕೇಳ್ ನಿನ್ನ ನೀ ಅರಿತು ಗೆದ್ದಾಗಲೇ ಜಯವೆಂದ ಬುದ್ಧ ಇವುಗಳನ್ನು ಒಳಗೊಂಡಿದೆ.
ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...
READ MORE