ಕೆಂಪು ಮತ್ತು ಇತರ ಬಹುಮಾನಿತ ಕತೆಗಳು

Author : ಅರ್ಪಣ ಎಚ್. ಎಸ್

Pages 118

₹ 120.00




Year of Publication: 2022
Published by: ಅರ್ಪಣ ಎಚ್. ಎಸ್
Address: ಟೆಕ್ ಫಿಜ಼್ ಇಂಕ್, ಬೆಂಗಳೂರು

Synopsys

ಲೇಖಕಿ ಅರ್ಪಣ ಎಚ್. ಎಸ್ ಅವರ ಕಥಾ ಸಂಕಲನ ‘ಕೆಂಪು ಮತ್ತು ಇತರ ಬಹುಮಾನಿತ ಕತೆಗಳು’. ಈ ಕೃತಿಯ ಕತೆಗಳ ಬಗ್ಗೆ ಪ್ರತ್ಯೇಕವಾಗಿ ನಾಡಿನ ಹಿರಿಯ ಕತೆಗಾರರು ಹಾಗೂ ಲೇಖಖರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಆ ಮಾಹಿತಿ ಬೆನ್ನುಡಿಯಲ್ಲಿ ವ್ಯಕ್ತವಾಗಿವೆ. 2014ರ ವಿಜಯವಾಣಿ ದೀಪಾವಳಿ ವಿಶೇಂಷಾಂಕದಲ್ಲಿ ಹಿರಿಯ ಲೇಖಕ ಕೇಶವ ಮಳಗಿ ಹಾಗೂ ನಟರಾಜ ಹುಳಿಯಾರ್ ಅವರು ಕೆಂಪು ಕತೆಯ ಬಗ್ಗೆ ಟಿಪ್ಪಣಿಯನ್ನು ಬರೆದಿದ್ದಾರೆ. ಅವರು ಹೇಳುವಂತೆ, ‘ಕೆಂಪು’ ಕತೆಯಲ್ಲಿ ಸ್ತ್ರೀ ವಿಶಿಷ್ಟ ಅನುಭವಲೋಕವನ್ನು ಮುಗ್ದವಾಗಿ ಹುಡುಕಿಕೊಳ್ಳಲು ಯಶಸ್ವಿಯಾಗಿದೆ. ಹದಿಹರೆಯದ ಹುಡುಗಿಯೊಬ್ಬಳ ಹೆಣ್ತನದ ಅರಿವು, ಆ ಘಟ್ಟದ ಆತಂಕ ಹಾಗೂ ಅವ್ಯಕ್ತ ಪುಳಕಗಳ ಲೋಕವೊಂದು ಅವಳ ಇನ್ನಿತರ ಗೆಳತಿಯರ ಅನುಭವಗಳೊಂದಿಗೆ ಬೆರೆತು ಸಾರ್ವತ್ರಿಕವಾಗುವ ರೀತಿಯಿಂದಾಗಿ ಕೂಡ ಈ ಕತೆ ಗಮನಾರ್ಹವಾಗಿದೆ ಎಂಬುದಾಗಿ ಹೇಳಿದ್ದಾರೆ.

About the Author

ಅರ್ಪಣ ಎಚ್. ಎಸ್

ಅರ್ಪಣ ಎಚ್. ಎಸ್ ಹುಟ್ಟಿದ್ದು ಶಿವಮೊಗ್ಗದಲ್ಲಿ ಬೆಳೆದದ್ದು ಮತ್ತು ಪದವಿಯವರೆಗೆ ಓದಿದ್ದು ಧರ್ಮಸ್ಥಳ ಮತ್ತು ಉಜಿರೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಈಟಿವಿಯಲ್ಲಿ ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದರು.. ಪ್ರಸ್ತುತ ಹೈದಾಬಾದಿನಲ್ಲಿ ನೆಲೆಸಿದ್ದು, ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯ ಮತ್ತು ಸಿನಿಮಾ ಆಸಕ್ತಿಯ ಕ್ಷೇತ್ರ. ಇವರ ಅನೇಕ ಕತೆ, ಕವನ ಮತ್ತು ಲಲಿತ ಪ್ರಬಂಧಗಳು ನಾಡಿನ ಪ್ರಮುಖ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಸಾಹಿತ್ಯ ಸರ್ಧೆಗಳಲ್ಲಿ ಬಹುಮಾನ ಗಳಿಸಿವೆ. ಕೃತಿ:”ಕೆಂಪು ಮತ್ತು ಇತರ ಬಹುಮಾನಿತ ಕತೆಗಳು’ ಇವರ ಮೊದಲ ಪ್ರಕಟಿತ ಕೃತಿ ...

READ MORE

Related Books