ತೊಂಭತ್ತರ ದಶಕದಲ್ಲಿ ಲೇಖಕರು ಮುಂಬೈಗೆ ಹೋದಾಗ ಹೆಚ್.ಐ.ವಿ ಪೀಡಿತ ಹೆಣ್ಣು ಮಗಳೊಬ್ಬಳು ತನ್ನ ಅಮೂಲ್ಯವಾದ 30ವರ್ಷಗಳ ಆಯುಷ್ಯವನ್ನು ಮುಂಬೈನ ವೇಶ್ಯಾವಾಟಿಕೆಯಲ್ಲಿ ಕಳೆದುಕೊಂಡವಳ ಕತೆ ಇದು. ಅದು ಅಲ್ಲಿಗೆ ಮಾತ್ರ ಸೀಮಿತವಾಗದೆ ಲೇಖಕರಿಗೆ ಅಂತವರ ಬದುಕಿನ ಬಗ್ಗೆ ಬೆಳಕು ಚೆಲ್ಲಲೇಬೇಕೆಂಬ ಹಠ. ನಂತರ ದಕ್ಷಿಣ ಭಾರತದ ಹಲವು ನಗರಗಳನ್ನು, ಸಣ್ಣ ಊರುಗಳನ್ನು ಸುತ್ತಿ ಅಂತಹ ಹೆಣ್ಣು ಮಕ್ಕಳನ್ನು ಹುಡುಕಿ ಭೇಟಿಯಾಗಿ ತಮ್ಮ ಉದ್ದೇಶವನ್ನು ಅವರಿಗೆ ಮನದಟ್ಟು ಮಾಡಿ, ಅವರ ಬಾಯಿಂದಲೇ ಅವರ ಜೀವನದ ಬಗ್ಗೆ ಕೇಳಿ ಬರೆದ ಕತೆಗಳಿವು. ಅವರು ಲೈಂಗಿಕ ಕಾರ್ಯಕರ್ತರಾಗಿ ಹೇಗೆ ಬದುಕಿದರು ಎನ್ನುವ ರೋಚಕ ಕತೆಗಳಿಗಿಂತ, ಎಲ್ಲರಂತೆ ನೆಮ್ಮದಿಯಾಗಿ ಬದುಕು ಕಟ್ಟಿಕೊಂಡು ಜೀವಿಸಬೇಕಿದ್ದ ಅವರು, ಹೇಗೆ ವೇಶ್ಯಾವಾಟಿಕಯ ಕೂಪದಲ್ಲಿ ಬಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ. ಇಂತಹವರ ಕಥೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರೋಚಕತೆಯಾಗಲಿ, ಕಾಮೋದ್ರೇಕಗೊಳಿಸುವ ಸನ್ನಿವೇಶಗಳಿಗೆ ಒತ್ತು ಕೊಡದೆ, ಬಡತನದಿಂದ, ಹಸಿವಿನಿಂದ, ಅಸಹಾಯಕತೆಯಿಂದ, ಕೆಲವು ಸ್ವಯಂಕೃತ ಅಪರಾಧಗಳಿಂದ ಲೈಂಗಿಕ ಕಾರ್ಯಕರ್ತೆಯರಾಗಿ ಬದಲಾದ ಬದುಕಿನ ತಿರುವುಗಳನ್ನು ಲೇಖಕರು ನೈಜವಾಗಿ ಚಿತ್ರಿಸಿದ್ದಾರೆ.
ಕವಿ,ಕತೆಗಾರ, ರಾಜಕೀಯ ವಿಶ್ಲೇಷಕ ಕು.ಸ.ಮಧುಸೂದನ ಅವರು 1963ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು. ಮಾತೃಭಾಷೆ ಮಲೆಯಾಳಂ. ಆದರೂ, ಓದಿದ್ದು ಬರೆದಿದ್ದು ಮಾತ್ರ ಕನ್ನಡದಲ್ಲಿಯೇ. ಸರ್ಕಾರಿ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ 30 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ(ಮುಡುಗೋಡು) ಗ್ರಾಮದಲ್ಲಿನೆಲೆಸಿದ್ದಾರೆ. ’ಅಸಹಾಯಕ ಆತ್ಮಗಳು’ ಕಥಾ ಸಂಕಲನ ರಚಿಸಿದ್ದು, ’ದುರಿತ ಕಾಲದ ದನಿ” ಅವರ ಕವನ ಸಂಕಲನ. ಸಮಕಾಲೀನ ರಾಜಕೀಯ ವಿದ್ಮಮಾನಗಳ ವಿಶ್ಲೇಷಣೆ ಒಳಗೊಂಡ ’ಮಣ್ಣಿನ ಕಣ್ಣು ಭಾಗ - 1 ಮತ್ತು 2' ನ್ನು ಪ್ರಕಟಿಸಿದ್ದಾರೆ ...
READ MORE