‘ಅಪ್ಪಾರಾಯನ ಪಾದಯಾತ್ರೆಯ ಹುಚ್ಚು’ ಕೇಶವ ಕುಡ್ಲ ಅವರ ಕಥಾಸಂಕಲನ. ಸಮಾಜದಲ್ಲಿ ಕಾಣಸಿಗುವ ಹಲವು ಮುಖಗಳ ಅಥವಾ ವ್ಯಕ್ತಿತ್ವಗಳ ತುಮುಲಗಳನ್ನು ಆಧರಿಸಿದ ಕಥಾವಸ್ತುವನ್ನೊಳಗೊಂಡ ಕಥೆಗಳು ಈಸಂಕಲನದಲ್ಲಿವೆ. ಸಂಖ್ಯಾ ದೃಷ್ಟಿಯಿಂದ ನೋಡಿದರೆ ನಮ್ಮ ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆಗಳ ಸಂಖ್ಯೆ ಕಡಿಮೆಯೆ. ಲೇಖನ ಮತ್ತು ವರದಿಗಳಿಗೆ ಹೆಚ್ಚು ಪ್ರಾಧಾನ್ಯತೆ. ಕಥೆಗಳನ್ನು ಪ್ರೀತಿಯಿಂದ ಪ್ರಕಟಿಸುವ ಪರಿಪಾಟ ಪತ್ರಿಕೆಗಳಲ್ಲಿ ಕಡಿಮೆಯಾಗುತ್ತಿದೆ ಎನ್ನುವುದು ಎಲ್ಲ ಕಥೆಗಾರರ ದೂರಾಗಿರುವಂತೆ ಕಂಡುಬರುತ್ತದೆ. ಕೇವಲ ಸಣ್ಣಕಥೆಗಳಿಗಷ್ಟೆ ಮೀಸಲಾಗಿದ್ದ ಒಂದೆರಡು ಸಾಹಿತ್ಯಿಕ ಪತ್ರಿಕೆಗಳೂ ಸಹ ಇತ್ತೀಚೆಗೆ ವೈಚಾರಿಕ ಲೇಖನಗಳಿಗೆ ಮಹತ್ವ ಕೊಡುತ್ತಿವೆ. ವೈಚಾರಿಕ ಹಾಗೂ ವಿಮರ್ಶಾ ಲೇಖನಗಳಿಗೆ ಮಾರುಕಟ್ಟೆ ಹೆಚ್ಚು ಎನ್ನುವ ಪ್ರಕಾಶಕರೂ ಸಹಾ ಇದೇ ಮಾತನ್ನು ಸಮರ್ಥಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಪತ್ರಿಕೆಯಲ್ಲಿ ಕಥೆ ಪ್ರಕಟವಾಗುವುದು ಸಂತಸದ ವಿಷಯವೆ. ಅದರಲ್ಲೂ ಆ ಕಥೆಗೆ ಓದುಗರು ಪ್ರತಿಕ್ರಿಯಿಸಿದರೆ ಅದು ಬೋನಸ್ಸಿದ್ದಂತೆ! ಇಂತಹ ಪರಿಸ್ಥಿತಿಯಲ್ಲೂ ನನ್ನ ಕಥೆಗಳು ಪ್ರಕಟವಾಗುತ್ತಿರುವುದು ನನಗೆ ಉಲ್ಲಾಸಕರ ಸಂಗತಿಯೆ ಆಗಿದೆ.
ಕೇಶವ ಕುಡ್ಲ ಅವರು ಮೂಲತಃ ದಕ್ಷಿಣ ಕನ್ನಡದವರು. ವಿಮಾಕಂಪೆನಿಯಲ್ಲಿ ಮೂರು ದಶಕ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮುಖ್ಯವಾಗಿ ಕೀಟ ಲೋಕದ ಛಾಯಾಗ್ರಹಣ, ಚಾರಣ ಮತ್ತು ಬರವಣಿಗೆ ಅವರ ಪ್ರಿಯ ಹವ್ಯಾಸ. ಇದುವರೆಗೆ 112 ಕಥೆಗಳು ಮತ್ತು ಒಂದು ಕಾದಂಬರಿ ಪ್ರಕಟವಾಗಿರುತ್ತದೆ., 400ಕ್ಕೂ ಹೆಚ್ಚು ಲೇಖನಗಳು ಮತ್ತು ಅದಕ್ಕೆ ಪೂರಕವಾಗಿ ಸುಮಾರು 2000 ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಶಸ್ತಿಗಳು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಬಹುಮಾನ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೃತಿಗಳು: ಒಡಲಾಳದ ಕತೆಗಳು, ಕಥಾ ಪಯಣ’ ...
READ MORE