1940ರಲ್ಲಿ ಮೊದಲ ಮುದ್ರಣವನ್ನು ಕಂಡಂತಹ ನನ್ನ ದೇವರು ಮತ್ತು ಇತರ ಕಥೆಗಳು, ಈವರೆಗೆ ಹದಿನೆಂಟು ಮುದ್ರಣಗಳನ್ನು ಕಂಡಿದೆ. ಈ ಪುಸ್ತಕದಲ್ಲಿ ನನ್ನ ದೇವರು, ಸಾಲದ ಮಗು, ಆದರ್ಶ ಸಾಧನೆ, ಔದಾರ್ಯ, ಗಂಟು ಅಥವಾ ಗುಪ್ತದಾನ, ಮೀನಾಕ್ಷಿಯ ಮನೆಮೇಷ್ಟರು, ಧನ್ವಂತರಿಯ ಚಿಕಿತ್ಸೆ ಹಾಗೂ ವೈರಾಗ್ಯದ ಮಹಿಮೆ ಹೀಗೆ ಒಟ್ಟು ಎಂಟು ಕಥೆಗಳನ್ನು ಒಳಗೊಂಡಂತಹ ಪುಸ್ತಕ ನನ್ನ ದೇವರು ಮತ್ತು ಇತರ ಕಥೆಗಳು. ಕುಟುಂಬದಲ್ಲಿನ ಕಷ್ಟ ಸುಖಗಳ ಕುರಿತಾಗಿ ನವಿರಾಗಿ ವಿವರಿಸಿ ಬರೆದಂತಹ ಪುಸ್ತಕವಿದು. ಒಂದು ಸಂಸಾರದಲ್ಲಿರುವ ವ್ಯಕ್ತಿಗಳ ನಡುವಿರುವ ಸಂಬಂಧಗಳ ಭಾವನೆಯನ್ನು ಈ ಪುಸ್ತಕದಲ್ಲಿ ವರ್ಣಿಸಲಾಗಿದೆ. ಸಾಲದ ಮಗು ಕಥೆಯಲ್ಲಿ, ಬಂಡವಾಳಶಾಹಿಕೋರರ ದೌರ್ಜನ್ಯಕ್ಕೆ ತುತ್ತಾದ ಅಮಾಯಕ ಬಾಲಕನ ಕಥೆ ಓದುಗರ ಮನ ಕಲುಕುತ್ತೆ. ಮುನ್ನೂರು ರೂಪಾಯಿ ಸಾಲಕ್ಕೆ ಜೀತದ ಆಳಾಗಿ ಗೌಡರ ಮನೆಯಲ್ಲಿ ಕೆಲಸಕ್ಕೆ ಸೇರುವ ಮುಗ್ದ ಬಾಲಕನ ಸಾವನ್ನು ಮನಸ್ಸಿಗೆ ನಾಟುವ ರೀತಿಯಲ್ಲಿ ಈ ಕಥೆಯಲ್ಲಿ ವಿವರಿಸಲಾಗಿದೆ. ಕುವೆಂಪು ಅವರ ಇತರ ಬರೆವಣಿಗೆಗಳಂತೆ ಈ ಪುಸ್ತಕದಲ್ಲಿನ ಕಥೆಗಳಲ್ಲಿ ಕೂಡ ಪ್ರಕೃತಿಯ ವಿವರಣೆ ಈ ಪುಸ್ತಕದಲ್ಲಿದೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE