ಲೇಖಕ ಎಚ್.ಆರ್.ವಿಶ್ವಾಸ ಅವರ ಕಥಾಸಂಕಲನ ಅಣ್ವಣೂಪಾಧ್ಯಾಯ. ಈ ಕೃತಿಯಲ್ಲಿ ಲೇಖಕ ಬಿ.ಜನಾರ್ದನ ಭಟ್ ಅವರು ಮುನ್ನುಡಿಯ ಮಾತುಗಳ್ನು ಬರೆದಿದ್ದಾರೆ. ಅವರು ಹೇಳುವಂತೆ,‘ ಈ ಕತೆಗಳಲ್ಲಿ ಬದುಕಿನ ಭೀಕರ ಅಥವಾ ವಿಹ್ವಲಗೊಳಿಸುವ ಅನುಭವಗಳಿಲ್ಲ. ಆದರೆ ಸರಳವಾದ, ದಿನನಿತ್ಯದ ಬದುಕಿನಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಜೀವನಾದರ್ಶಗಳು ಯಾವುವು ಎನ್ನುವುದನ್ನು ತೋರಿಸುವಂತೆ ಈ ಕತೆಗಳಿವೆ. ಸರಳ ನಿರೂಪಣೆಯಲ್ಲಿ ತಾವು ಕತೆಗಳನ್ನು ಬರೆಯುತ್ತೇವೆ ಎಂದು ಲೇಖಕರು ಹೇಳಿದರೂ, ಆ ಕತೆಗಳು ಕೊನೆಯವರೆಗೂ ಆಸಕ್ತಿಯನ್ನು ಉಳಿಸಿಕೊಂಡು ಓದಿಸಿಕೊಳ್ಳುವಂತಹ ನಿರೂಪಣೆ ಕಲೆ ಅವರಿಗೆ ಸಿದ್ಧಿಸಿದೆ’ ಎಂಬುದಾಗಿ ಹೇಳಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ದಂಡವಸೂಲಿ, ಹೋದೆಯಾ ಪಿಶಾಚಿ ಅಂದ್ರೆ…., ಸ್ವಾಮಿಗಳ ಅಂತರಂಗ, ಪುರಸ್ಕಾರದ ರಹಸ್ಯ, ಅರ್ಧಜರತೀ, ಇದು ಉದಾಹರಣೆ, ಅಪರಾಧ, ಅಹಾ ಕಂಡೆನು ತಾಯ್ತನವ!, ಮಾನಸಿಕ ಮನದಳಲು, ಅಣ್ಣನೂಪಾಧ್ಯಾಯ ಎಂಬ ಹತ್ತು ಶೀರ್ಷಿಕೆಗಳ ಕತೆಗಳಿವೆ.
ಮಲೆನಾಡಿನ ಕೊಪ್ಪ ತಾಲೂಕಿನ ಹುಲಿಯಾಳಿ ಗ್ರಾಮದ ವಿಶ್ವಾಸ ಅವರು ಸಂಸ್ಕೃತ ವಿದ್ವಾಂಸರು. ಎಂ.ಎ. ಮತ್ತು ಪಿ.ಹೆಚ್.ಡಿ. ಪದವೀಧರರು. ಸಂಸ್ಕೃತ - ಕನ್ನಡ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಉತ್ತರಪ್ರದೇಶ ಸಂಸ್ಕೃತ ಅಕಾಡೆಮಿ ಹಾಗೂ ಸಂಸ್ಕೃತದಲ್ಲಿ ಬಾಲಸಾಹಿತ್ಯಕ್ಕಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘ವಾಚಸ್ಪತಿ’ (ಡಿ.ಲಿಟ್) ಪದವೀಧರರು. ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ...
READ MORE