ಬಣಮಿ

Author : ಕಪಿಲ ಪಿ ಹುಮನಾಬಾದೆ

Pages 96

₹ 110.00




Year of Publication: 2024
Published by: ಕಾವ್ಯ ಮನೆ ಪ್ರಕಾಶನ
Address: #220, ವೀರೇಂದ್ರ ಪಾಟೀಲ್ ಬಡಾವಣೆ , 1ನೇ ಬ್ಲಾಕ್, ಸೇಡಂ ರೋಡ್, ಕಲಬುರಗಿ- 585105
Phone: 8722039612

Synopsys

“ಬಣಮಿ” ಕಪಿಲ ಪಿ ಹುಮನಾಬಾದೆ ಅವರ ಕಥಾ ಸಂಕಲನವಾಗಿದೆ. ಕೃತಿಯು ತುದಿ ಇಲ್ಲದ ಹಳ್ಳ, ಒಳಕಲ್ಲು, ಬಿದಿರು, ನುಸಿ, ನಿರೋಷ, ಬಣಮಿ, ಆ ಕತ್ತಲ ಕಾಡಿನಲ್ಲಿ, ಗೆದ್ದಲು, ಮುಗಿಲ ತುದಿ, ಬಿಸಿಲು ಎಂಬ ಕಥೆಗಳನ್ನೊಳಗೊಂಡಿದೆ. 'ಬಣಮಿ' ಯ ಬಹುತೇಕ ಕೇಂದ್ರ ಪಾತ್ರಗಳೆಲ್ಲ ನನ್ನೊಳಗೆ ತಾನೆ ಲೀನವಾಗಿರುವ ಮತ್ತು ತನ್ನ 'ತನ'ದ ಹುಡುಕಾಟದಲ್ಲಿರುವ ಅಲೆಮಾರಿ ಸ್ವಪ್ನಗಳಿದ್ದ ಹಾಗೆ. ಆರಂಭದಲ್ಲಿ ಪಾತ್ರಗಳಿಗೆ ಕಾಡುವ ಅನಾಥ ಪ್ರಜ್ಞೆ ನಂತರದಲ್ಲಿ ಏನೋ ಆಗಿ ಬಿಡುವ ಚಲನಶೀಲ ದೃಷ್ಟಿ ಇಲ್ಲಿ ಕಾಣುತ್ತೇವೆ. ಇಲ್ಲಿನ ಪ್ರತಿ ಕತೆಯೂ ಒಂದಕ್ಕೊಂದು ಸಂಬಂಧವಿರುವ ಮತ್ತು ಸಂಬಂಧ ಕಲ್ಪಿಸಬಹುದಾದ ಸರಪಳಿ ಮಾದರಿಯ ಕಲಾಕೃತಿ ಇದಾಗಿದೆ.

About the Author

ಕಪಿಲ ಪಿ ಹುಮನಾಬಾದೆ
(25 January 1996)

ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರು ಮೂಲತಃ ಬೀದರ್ ನವರು. ಬೀದರನಿಂದ ನೌಬಾದ ಹಾದಿ ಹಿಡಿದು, ಎರಡು ಬೋಳು ಗುಡ್ಡವಿಳಿದು ಹೋದರೆ ಅಲ್ಲಿ ಕಾಣುವ ಅಲಿಯಾಬಾದ್ ಎಂಬ ಪುಟ್ಟ ಗ್ರಾಮದಲ್ಲಿ 1996 ಜನವರಿ 25ರಂದು ಜನಿಸಿದರು. ಪ್ರಭು ವೀರಶೆಟ್ಟಿಯವರ ಮೊದಲ ಮಗ ಕಪಿಲ ಪಿ ಹುಮನಾಬಾದೆ. 2019 ನೇ ಸಾಲಿನ ವಿಜಯಕರ್ನಾಟಕ ಯುಗಾದಿ ಕಥಾಸ್ಪರ್ಧೆಯ ಟಾಪ್ 25 ಕಥೆಗಳಲ್ಲಿ ಇವರ ಬಾಗಿಲು ಎಂಬ ಸಣ್ಣಕಥೆ ಆಯ್ಕೆಯಾಗಿದೆ. ಸದ್ಯ ಕಾವ್ಯಮನೆ ಪ್ರಕಾಶನ ಬಳ್ಳಾರಿ, ಮುಖ್ಯ ಸಂಚಾಲಕರಾಗಿ ಕಾರ್ಯ ನಿರ್ವೈಸುತ್ತಿದ್ದಾರೆ. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಎಂ.ಎ ಎರಡನೇ ...

READ MORE

Related Books