ಲೇಖಕ ಬಿ.ಆರ್ ಸುಹಾಸ್ ಅವರ ಸಂಗ್ರಹ ಹಾಗೂ ಮರುನಿರೂಪಣೆಯ ಕೃತಿ ‘ದೇಶ ವಿದೇಶಗಳ ಸ್ವಾರಸ್ಯಕರ ಜಾನಪದ ಕಥೆಗಳು’. 66ನೇ ಕನ್ನಡ ರಾಜ್ಯೋತ್ಸವದ ವೇಳೆಯಲ್ಲಿ ಸಪ್ನ ಬುಕ್ ಹೌಸ್ ಪ್ರಕಾಶನದ ಮೂಲಕ ತೆರೆ ಕಂಡ ಕೃತಿಯಿದೆ. ಈ ಕೃತಿಗೆ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ
ಬೆಂಗಳೂರಿನ ಎಂ.ಎಸ್.ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ ಪೂರೈಸಿದ ಡಾ. ಬಿ. ಆರ್ ಸುಹಾಸ್, 1976 ಜೂ. 26 ರಂದು ಬೆಂಗಳೂರಿನಲ್ಲಿ ಹುಟ್ಟಿದ್ದು. ಸದ್ಯ ನಂದಿನಿ ಲೇಔಟ್ ನಲ್ಲಿ ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿದ್ದಾರೆ. ಪ್ರವೃತ್ತಿಯಿಂದ ಬರಹಗಾರರು, ಗಾಯಕರು, ಛಾಯಾಚಿತ್ರಗ್ರಾಹಕರೂ ಆಗಿದ್ದಾರೆ. ಚರ್ಮದ ಕಾಯಿಲೆಗಳು, ಕಥಾಕೋಶ, ಆಯುರ್ವೇದ ಸಂಪೂರ್ಣ ಮಾರ್ಗದರ್ಶಿ, ಝೆನ್ ಕಥೆಗಳು, ಭಾರತದ ವನ್ಯಧಾಮಗಳು, ಚಾಣಕ್ಯ ನೀತಿ, ಕಿರಿಯ ಕಥಾ ಸರಿತ್ಸಾಗರ, ವಿಲಿಯಂ ಹಾರ್ವೆ, ಲೂಯಿಸ್ ಪಾಶ್ಚರ್ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ...
READ MORE