ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಕಥಾ ಸಂಕಲನ-ಬಿಸಿಲುಗುದುರೆ ಹಾಗೂ ಇತರ ಕಥೆಗಳು. ಬದುಕಿನ ತವಕ-ತಲ್ಲಣಗಳು, ನಮಮ, ಬಿಸಿಲುಗುದುರೆ, ನಾನು ಆಶ್ರಮ ಮತ್ತು ಚೆಲುವಿ ಇತ್ಯಾದಿ ಕಥೆಗಳು ತಮ್ಮ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಗುಣಗಳಿಂದ ಕಥೆಗಳು ಓದುಗರ ಗಮನ ಸೆಳೆಯುತ್ತವೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಹಾಗೂ ಗಾಯಕಿ ಡಾ. ಅನಸೂಯಾದೇವಿ ‘ಬದುಕಿನಲ್ಲಿ ಎದುರಾಗುವ ನೈರಾಶ್ಯಗಳು, ಸಂಕಟಗಳು, ಹೊಂದಾಣಿಕೆಯ ಅಗತ್ಯತೆಗಳು, ಪಶ್ಚಾತ್ತಾಪ, ಪುಣ್ಯ- ಪಾಪದ ಕೃತ್ಯಗಳು, ಪ್ರಾಯಶ್ಚಿತ್ತದ ಆಲಾಪ-ಪ್ರಲಾಪಗಳು ಇವೆಲ್ಲವನ್ನೂ ತಮ್ಮ ಲೇಖನಿಯ ಮೂಲಕ ಕಥೆಗಳಲ್ಲಿ ಹೆಣೆದು ಜೀವ ತುಂಬಿದ್ದಾರೆ. ಜೀವನಾನುಭವದ ಸುತ್ತಮುತ್ತಲಿನ ಮನೋವ್ಯಾಪಾರಗಳನ್ನು ಇಲ್ಲಿಯ ಕಥೆಗಳಲ್ಲಿ ಚಿತ್ರಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ (ಜನನ: 05-02-1951) ಗ್ರಾಮದವರು. ತಂದೆ- ಮುಳವಾಗಲಯ್ಯ, ತಾಯಿ- ನಿಂಗಮ್ಮ. ನಿಡಸಾಲೆಯಲ್ಲಿ ಪ್ರಾಥಮಿಕ, ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಯವರೆಗೆ ವ್ಯಾಸಂಗ ಪೂರ್ಣಗೊಳಿಸಿದರು. 1968ರಲ್ಲಿ ಬೆಂಗಳೂರಿನ ಐ.ಟಿ.ಐ.ನಲ್ಲಿ ತರಬೇತಿ ಪಡೆದು, 1969ರಿಂದ ಕೃಷಿ ಇಲಾಖೆಯಲ್ಲಿ ಉದ್ಯೋಗ ಆರಂಭಿಸಿದರು. ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ತೇರ್ಗಡೆ ಯಾಗಿ ಬಿ.ಕಾಂ.ಗೆ ಸೇರ್ಪಡೆಯಾದರು. ಹಿರಿಯ ಸಾಹಿತಿ ಬಿ.ಜಿ. ಸತ್ಯಮೂರ್ತಿಯವರ ಒಡನಾಟದಲ್ಲಿ 1971ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಅವರು ಸಣ್ಣ ಕಥೆ, ನಾಟಕ, ಕಾದಂಬರಿ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಕೃತಿಗಳು: ಗೊಲ್ಲಳ್ಳಿ ತೋಟ’, ‘ಸಾಧನೆಯ ...
READ MORE