ಕ್ಷಿತಿಜ ಬೀದರ್ ಅವರ ಆರನೇ ಕಥಾಸಂಕಲನ ’ದರ್ಶನ’. ಸಂಕಲನ ಕುರಿತು ಎಸ್.ಜಯರಾಂ ಕರ್ಮವೀರ ಪತ್ರಿಕೆಯಲ್ಲಿ ’ಮೂರನೇ ಮನುಷ್ಯನ ಕಣ್ಣಿಗಳು, ಪುಷ್ಯದ ರಾತ್ರಿ ಮತ್ತು ಸೇವಾ ಮಾರ್ಗ ಹಿಂದಿ ಮೂಲದ ಕತೆಗಳಾಗಿದ್ದು ಉಳಿದ ಕಥೆಗಳು ಲೇಖಕರ ಸ್ವಂತ ಕಥೆಗಳಾಗಿವೆ. ಕಥೆಗಳ ಭಾಷೆ ಹಾಗೂ ಶೈಲಿ ಚೆನ್ನಾಗಿದ್ದು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಇಲ್ಲಿನ ಕಥೆಗಳನ್ನು ಓದಿದಾಗ ಪಳಗಿದ ಕೈಯಿಂದ ರಚಿತವಾದ ಕಥೆಗಳಿವು ಎಂಬುದನ್ನು ಮನಗಾಣಬಹುದು’ ಎಂದು ಬರೆದಿದ್ದರು. ಈ ಕಥೆಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.
’ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...
READ MORE