ಪಾರಿವಾಳಗಳು (ಕಥಾ ಸಂಕಲನ)

Author : ಎ.ಎನ್. ಪ್ರಸನ್ನ

Pages 156

₹ 20.00




Year of Publication: 1989
Published by: ಕೀರ್ತಿ ಪ್ರಕಾಶನ
Address: # 101, ಗಣೇಶ ಮಂದಿರ ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು-560028

Synopsys

ಲೇಖಕ ಎ.ಎನ್. ಪ್ರಸನ್ನ ಅವರ ಕಥಾ ಸಂಕಲನ-ಪಾರಿವಾಳಗಳು. ವಿಮರ್ಶಕ ಡಾ. ಕೆ.ವಿ. ನಾರಾಯಣ ಅವರು ಕೃತಿಗೆ ಮುನ್ನುಡಿ ಬರೆದು ‘... ಇಲ್ಲಿ ವ್ಯಕ್ತಿಯ ಜಗತ್ತನ್ನು ಒಳಗಿನಿಂದ ಹಾಗೂ ಹೊರಗಿನಿಂದ ಒಟ್ಟೊಟ್ಟಾಗಿ ಸ್ಫೋಟಿಸುವ, ತೆರೆಯುವ, ಕಡೆದಿರಿಸುವ ವಿಧಾನವಿದೆ. ಈ ವಿಧಾನಕ್ಕೆ ವಾಸ್ತವವೇ ಆರಂಭ ಹಾಗೂ ಕೊನೆ. ಪ್ರತಿವಾಸ್ತವ ಕೂಡ ವಾಸ್ತವದ ಒಂದು ಒಳಸಾಧ್ಯತೆ’ ಎಂದು ಅಭಿಪ್ರಾಯಪಟ್ಟಿದ್ದರೆ, ಸಾಹಿತಿ ವೈಯನ್ಕೆ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಪುಸನ್ನರಿಗೆ ವ್ಯಕ್ತಿಗಳ ನಡುವಿನ ಸಂಬಂಧಗಳ ಎಳೆಯನ್ನು ಪದರುಪದರಾಗಿ ಬಿಡಿಸಿ ನೋಡುವುದು ಮುಖ್ಯ. ಮನುಷ್ಯನ ಒಳಬಾಳಿನ ಮಹತ್ವ ಅರಿತಿರುವ ಪ್ರಸನ್ನರಿಗೆ, ಅದು ಸಾಹಿತ್ಯವಾಗಲು ಹೊರಜೀವನದ ಸ್ವಾರಸ್ಯಪೂರ್ಣ ಎಡೆಬಿಡದ ವಿವರಗಳೇ ಸಾಧನ, ಭೂತ- ವರ್ತಮಾನ, ಅಪ್ಪ-ಮಗ, ಹಳೆಯ ಮಿತ್ರನ ಭೇಟಿ - ಈ ರೀತಿ ಮುಖಾಮುಖಿ ಪ್ರಸನ್ನರ ಕಥೆಗಳಲ್ಲಿ ಮತ್ತೆ ಮತ್ತೆ ತಲೆದೋರುತ್ತದೆ. ಸಂಬಂಧಗಳ ಅಗ್ನಿಪರೀಕ್ಷೆಯಲ್ಲಿ ವ್ಯಕ್ತಿ ಮನಸ್ಸಿನ ತಾಕಲಾಟದಲ್ಲಿ ಏನಾಗುತ್ತಾನೆ ಎನ್ನುವುದು ಪ್ರಸನ್ನ ಅವರಿಗೆ ಮುಖ್ಯ. ಮನ ಸೆರೆಹಿಡಿಯುವ ವಿವರಗಳನ್ನು ಕತೆಯ ವಾಸ್ತವಿಕತೆಗೆ ಒತ್ತುಕೊಡುವಂತೆ ಬಳಸುವುದು ಪ್ರಸನ್ನ ಅವರ ವೈಶಿಷ್ಟ್ಯ’ ಎಂದು ಪ್ರಶಂಸಿಸಿದ್ದಾರೆ.

About the Author

ಎ.ಎನ್. ಪ್ರಸನ್ನ

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...

READ MORE

Related Books