‘ದೇವರ ಬೆಟ್ಟ’ ಲೇಖಕ ಹಾಡ್ಲಹಳ್ಳಿ ನಾಗರಾಜ್ ಅವರ ಪ್ರಥಮ ಕಥಾ ಸಂಕಲನ ಇಲ್ಲಿ ಅವರ ಹತ್ತು ಕಥೆಗಳು ಸಂಕಲನಗೊಂಡಿವೆ. ಇಲ್ಲಿನ ಎಲ್ಲಾ ಕತೆಗಳು ತಂತಾನೆ ಓದಿಸಿಕೊಂಡು ಹೋಗುತ್ತವೆ. ಮತ್ತು ಹಾಡ್ಲಹಳ್ಳಿ ನಾಗರಾಜ್ ಅವರು ತಮ್ಮ ಕಥೆಗಳಲ್ಲಿ ಔಚಿತ್ಯವರಿತು ಪ್ರಕೃತಿ ವರ್ಣನೆಯನ್ನು ತರಬಲ್ಲರು, ಹೇಳಬೆಕೆಂದಿರುವ ವಿಷಯವನ್ನು ನೇರವಾಗಿ ಓದುಗರಿಗೆ ವರ್ಗಾಯಿಸುತ್ತಾರೆ. ಆಗಾಗಿ ಇಲ್ಲಿನ ಹತ್ತೂ ಕಥೆಗಳು ಗ್ರಾಮ್ಯ ಪರಿಸರದೊಂದಿಗೆ ಓದುಗರನ್ನು ಅರ್ಥಪೂರ್ಣವಾಗಿ ತಲುಪುತ್ತವೆ.
ಹಾಡ್ಲಹಳ್ಳಿ ನಾಗರಾಜು ಅವರು ಮೂಲತಃ ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ ಗ್ರಾಮದವರು. ತಂದೆ- ಗುರುಶಾಂತೇಗೌಡರು, ತಾಯಿ- ಪುಟ್ಟಮ್ಮ. ಕಡುಬಡತನದ ರೈತಾಪಿ ಕುಟುಂಬದಲ್ಲಿ ಜನಿಸಿದ ಅವರು ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾಪತ್ರಕ್ಕೆ ಪಾತ್ರರಾಗಿದ್ದಾರೆ. ಎನ್.ಸಿ.ಸಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಂತರ ಅದೇ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಹಾಸನ ನಗರ ಸಮೀಪ ಅತ್ತಿಹಳ್ಳಿ ಎಂಬ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪಟ ಮಲೆನಾಡಿನ ಪರಿಸರದಲ್ಲಿ ಹುಟ್ಟಿಬೆಳೆದ ನಾಗರಾಜು ಅವರು ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪುಮೂಡಿಸಿದ್ದಾರೆ. ...
READ MORE